ಶಿವಮೊಗ್ಗ : ಸಿಗ್ನಲ್ ರೆಜಿಮೆಂಟ್‌ನಲ್ಲಿ ಯು.ಹೆಚ್.ಕ್ಯೂ. (UHQ) ಕೋಟಾದಡಿ ಅಗ್ನಿಪಥ್ ಯೋಜನೆಯ ವಿವಿಧ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಭಾಗವಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನೇಮಕಾತಿ ಪ್ರಕ್ರಿಯೆಯು ಆಗಸ್ಟ್ 18 ರಿಂದ ಆಗಸ್ಟ್ 21 ರವರೆಗೆ ನಡೆಯಲಿದೆ. ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್ ಹಾಗೂ ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು, 17 ವರ್ಷ 6 ತಿಂಗಳಿಂದ 22 ವರ್ಷದೊಳಗಿನ ವೀರನಾರಿಯರು, ಮಾಜಿ ಸೈನಿಕರ ಮಕ್ಕಳು ಮತ್ತು ಸೈನಿಕರ ಸ್ವಂತ ಸಹೋದರರು (ತಮ್ಮಂದಿರು) ಅರ್ಜಿ ಸಲ್ಲಿಸಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 18 ರಂದು ಬೆಳಿಗ್ಗೆ 5.00 ಗಂಟೆಗೆ ಮಧ್ಯಪ್ರದೇಶದ ಜಬಲ್‌ಪುರ ರಸ್ತೆಯಲ್ಲಿರುವ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಮೈದಾನದಲ್ಲಿ ಹಾಜರಾಗಬೇಕು. ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ದೂರವಾಣಿ ಸಂಖ್ಯೆ **04027-863016** ಅನ್ನು ಸಂಪರ್ಕಿಸಬಹುದು.