image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸ್ವಿಗ್ಗಿ, ಜೊಮೊಟೋಗೆ ಶಾಕ್: ಆಗಸ್ಟ್ 15ರಿಂದ ಫುಡ್ ಡೆಲಿವರಿ ಬಹಿಷ್ಕಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಎಚ್ಚರಿಕೆ!

ಸ್ವಿಗ್ಗಿ, ಜೊಮೊಟೋಗೆ ಶಾಕ್: ಆಗಸ್ಟ್ 15ರಿಂದ ಫುಡ್ ಡೆಲಿವರಿ ಬಹಿಷ್ಕಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಎಚ್ಚರಿಕೆ!

ಬೆಂಗಳೂರು : ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಜೊಮೊಟೋ ವಿರುದ್ಧ ಬೆಂಗಳೂರಿನ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಗಸ್ಟ್ 15ರ ನಂತರ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 'ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ'ದ (BBHA) ಗೌರವಾಧ್ಯಕ್ಷ ಪಿ.ಸಿ. ರಾವ್ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೋಟೆಲ್‌ಗಳ ಅನುಮತಿಯಿಲ್ಲದೆ ಅನಧಿಕೃತ ಆಫರ್‌ಗಳನ್ನು ನೀಡುವುದು, ಶೇ. 25 ರಿಂದ 30 ರಷ್ಟು ಹೆಚ್ಚಿನ ಕಮಿಷನ್ ಕಡಿತ ಮಾಡುವುದು, ಬಲವಂತವಾಗಿ ಜಾಹೀರಾತು ವೆಚ್ಚ ಹೇರುವುದು ಹಾಗೂ ಬಿಲ್ ಮೊತ್ತ ಪಾವತಿಸುವಲ್ಲಿ ವಿಳಂಬ ಮಾಡುವುದರಿಂದ ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಆಹಾರ ಸಿದ್ಧವಾಗಿ ಡೆಲಿವರಿ ಬಾಯ್ ಕೈಗೆ ತಲುಪಿದ ನಂತರ ಗ್ರಾಹಕರು ಆರ್ಡರ್ ರದ್ದುಗೊಳಿಸಿದರೆ, ಆ ಆಹಾರ ಹೋಟೆಲ್‌ಗೆ ವಾಪಸ್ ಬರುವುದಿಲ್ಲ ಹಾಗೂ ಬಿಲ್ ಮೊತ್ತವೂ ಸಿಗುವುದಿಲ್ಲ. ಇದರಿಂದ ಆಹಾರ ಮತ್ತು ಹಣ ಎರಡನ್ನೂ ಹೋಟೆಲ್ ಮಾಲೀಕರು ಕಳೆದುಕೊಳ್ಳುತ್ತಿದ್ದಾರೆ. ಈ ಆನ್‌ಲೈನ್ ವ್ಯವಸ್ಥೆಯು ಗ್ರಾಹಕರಿಗೂ ದುಬಾರಿಯಾಗಿದ್ದು, ಹೋಟೆಲ್ ಉದ್ಯಮಿಗಳಿಗೂ ತೀವ್ರ ನಷ್ಟ ಉಂಟುಮಾಡುತ್ತಿದೆ. ತಕ್ಷಣವೇ ಸರ್ಕಾರ ಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಶೋಷಣೆಯನ್ನು ತಡೆಯಬೇಕು, ಒಂದು ವೇಳೆ ಆಗಸ್ಟ್ 15ರೊಳಗೆ ಸಂಸ್ಥೆಗಳು ತಮ್ಮ ನಿಯಮಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಗರದಾದ್ಯಂತ ಸ್ವಿಗ್ಗಿ ಮತ್ತು ಜೊಮೊಟೋ ಮೂಲಕ ಫುಡ್ ಡೆಲಿವರಿ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಹೋಟೆಲ್ ಸಂಘ ಅಂತಿಮ ಎಚ್ಚರಿಕೆ ನೀಡಿದೆ.

Category
ಕರಾವಳಿ ತರಂಗಿಣಿ