image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಂಗ್ರೆಸ್ ಶಾಸಕರು ಹೈಕಮಾಂಡ್ ಬಳಿ ಬರ ಅಧ್ಯಯನ ಮಾಡುತ್ತಿದ್ದಾರೆ: ಡಾ. ಸಿ.ಟಿ. ರವಿ ವ್ಯಂಗ್ಯ

ಕಾಂಗ್ರೆಸ್ ಶಾಸಕರು ಹೈಕಮಾಂಡ್ ಬಳಿ ಬರ ಅಧ್ಯಯನ ಮಾಡುತ್ತಿದ್ದಾರೆ: ಡಾ. ಸಿ.ಟಿ. ರವಿ ವ್ಯಂಗ್ಯ

ಬೆಂಗಳೂರು : ರಾಜ್ಯದಲ್ಲಿ 180ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ ಎನ್ನುವುದು ಅನಧಿಕೃತ ಮಾಹಿತಿಯಷ್ಟೇ, ಏಕೆಂದರೆ ಸರ್ಕಾರ ಇಂದಿಗೂ ಅಧಿಕೃತವಾಗಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ಬರದ ತೀವ್ರತೆಯನ್ನು ಮನಗಂಡು ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಶಾಸಕರು ದೆಹಲಿಯ ಹೈಕಮಾಂಡ್ ಬಳಿ ಹೋಗಿದ್ದಾರೇನೋ, ಬರಕ್ಕೆ ಪರಿಹಾರ ಹೈಕಮಾಂಡ್ ಬಳಿಯೇ ಇದೆಯೇನೋ ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು ವ್ಯಂಗ್ಯವಾಡಿದರು. ಕೆಲವರು ರಾಜ್ಯದ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ವರದಿ ತೆಗೆದುಕೊಂಡು ಹೋಗಿದ್ದರೆ, ಇನ್ನು ಕೆಲವರು ಹೈಕಮಾಂಡ್ ಬಳಿಯೇ ಅಧ್ಯಯನ ಮಾಡಲಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಬಹುತೇಕ ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಆವರಿಸಿದೆ. ಶಾಸಕರು ಹಳ್ಳಿಗಳಿಗೆ ಭೇಟಿ ನೀಡಿದರೆ ಜನರು ಕುಡಿಯುವ ನೀರಿನ ಬವಣೆ, ಜಾನುವಾರುಗಳ ದುಸ್ಥಿತಿ ಹಾಗೂ ಬಿತ್ತನೆ ಬೀಜ ಹಾಳಾಗಿರುವ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಸರ್ಕಾರವು ಸುಮಾರು 23 ಲಕ್ಷ ಜನರ ಪಿಂಚಣಿ ರದ್ದುಪಡಿಸಿರುವುದರಿಂದ ಬಡವರಿಗೆ ಪಿಂಚಣಿ ಹಣವೂ ತಲುಪುತ್ತಿಲ್ಲ ಎಂದು ಡಾ. ರವಿ ಆರೋಪಿಸಿದರು. ರಾಜ್ಯದಲ್ಲಿ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಸಿಗುತ್ತಿಲ್ಲ. ಇವೆಲ್ಲದರ ನಡುವೆ ನಮಗೆ ಯಾವ ಗ್ರಹಚಾರ ಎಂದುಕೊಂಡು ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಕುಳಿತಿದ್ದಾರೆ ಎಂದು ಡಾ. ಸಿ.ಟಿ. ರವಿ ಅವರು ವಾಗ್ದಾಳಿ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ