ರಾಮನಗರ: ರಾಜ್ಯ ಮಹಿಳಾ ಆಯೋಗಕ್ಕೆ ವಿವಿಧ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಕುಂಬಳಗೂಡು ಪೊಲೀಸರು ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ಕುಂಬಳಗೂಡು ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ ನೋಟಿಸ್ ನೀಡಿ ಬಂದಿದ್ದಾರೆ. ಮಹಿಳಾ ಆಯೋಗದ ಮನವಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಗ್ ಬಾಸ್ ಮನೆಗೆ ತೆರಳಿ ವಿಚಾರಣೆಗೆ ಬರುವಂತೆ ಆಯೋಜಕರಿಗೆ ನೋಟಿಸ್ ನೀಡಲಾಗಿದೆ. ಶೋನಲ್ಲಿ ಮಹಿಳೆಯರ ಸಮಾನತೆಗೆ ಧಕ್ಕೆ ತರಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ ಎಂದು ವಿವಿಧ ಸಂಘಟನೆಗಳು ಆಯೋಗಕ್ಕೆ ದೂರು ನೀಡಿದ್ದವು.
ಸ್ವರ್ಗ ಮತ್ತು ನರಕ ವಿಷಯಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಹೇಳಿಕೆಗಳ ಬಗ್ಗೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯ ಮಹಿಳಾ ಆಯೋಗ ದೂರು ಆಧರಿಸಿ, ಬಿಗ್ ಬಾಸ್ ಸೆಟ್ಗೆ ತೆರಳಿ ನೋಟಿಸ್ ನೀಡಿದ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಸ್ವರ್ಗ, ನರಕ ವಿಚಾರವಾಗಿ ನಡೆದ ಒಟ್ಟು ಸಂಭಾಷಣೆಯ ರಾ ಫುಟೇಜ್ ನೀಡಲು ಸೂಚಿಸಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಒಂದು ವೇಳೆ ಅಸಡ್ಡೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಠಾಣೆಗೆ ಬಂದು ರಾ ಫುಟೇಜ್ ನೀಡುವಂತೆ ಸೂಚಿಸಲಾಗಿದೆ