image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಜೆಪಿಯೇ ಒಂದು ಉಗ್ರಗಾಮಿಗಳ ಪಕ್ಷವಾಗಿದೆ -ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಯೇ ಒಂದು ಉಗ್ರಗಾಮಿಗಳ ಪಕ್ಷವಾಗಿದೆ -ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಕಾಂಗ್ರೆಸ್‌‌ನವರು ಅರ್ಬನ್ ನಕ್ಸಲರು ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಮೋದಿ ಈ ರೀತಿ ಮಾತು ಯಾವಾಗಲೂ ಹೇಳ್ತಾನೆ ಇರ್ತಾರೆ. ಈಗಲೂ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್‌ ಬಗ್ಗೆ ಮೋದಿ ಈ ರೀತಿ ಹೇಳಿಕೆ ಹೊಸದೇನಲ್ಲ. ಮೋದಿ ಅವರು ದೇಶದ ಬುದ್ಧಿಜೀವಿಗಳಿಗೆ ಅರ್ಬನ್ ನಕ್ಸಲ್ಸ್ ಅಂತಾರೆ. ಕಾಂಗ್ರೆಸ್‌ ಪಕ್ಷವನ್ನ ಹೀಯಾಳಿಸುವುದು ಮೋದಿಯವರ ಚಾಳಿಯಾಗಿದೆ ಎಂದಿದ್ದಾರೆ. ಕಲಬುರುಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಸ್ತವವಾಗಿ ಬಿಜೆಪಿ ಪಕ್ಷವೇ ಒಂದು ಉಗ್ರಗಾಮಿಗಳ ಪಕ್ಷವಾಗಿದೆ. ದಲಿತ ಮತ್ತು ಹಿಂದುಳಿದವರ ಮೇಲೆ ಇವರೇ ಹಲ್ಲೆ ಮಾಡ್ತಾರೆ. ಬುಡಕಟ್ಟು ಜನಾಂಗದವರ ಮೇಲೆ ಅತ್ಯಾಚಾರ ಮಾಡುತ್ತಾರೆ. ಇಂತಹ ಕೃತ್ಯಗಳನ್ನ ಎಸಗುವವರಿಗೆ ಇವರೇ ಬೆಂಬಲ ನೀಡಿ ಈಗ ಬೇರೆಯವರ ಮೇಲೆ ಆರೋಪ ಮಾಡ್ತಾರೆ ಎಂದರು.

ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ದಲಿತ, ಹಿಂದುಳಿದವರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಮೋದಿ ಅವರು ಬೇರೆಯವರ ಮೇಲೆ ಆರೋಪ ಮಾಡುವ ಬದಲು ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ನೀವು ಕಂಟ್ರೋಲ್ ಮಾಡೋದು ಬಿಟ್ಟು ನಮ್ಮ ಮೇಲೆ ಆರೋಪ ಮಾಡೋದು ಸರಿನಾ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

Category
ಕರಾವಳಿ ತರಂಗಿಣಿ