image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ಮತ್ತಷ್ಟು ಗುಣಮಟ್ಟದ ಅಕ್ಕಿ, ಕೇಂದ್ರ ಸಂಪುಟ ಮಹತ್ವದ ಅನುಮೋದನೆ

ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ಮತ್ತಷ್ಟು ಗುಣಮಟ್ಟದ ಅಕ್ಕಿ, ಕೇಂದ್ರ ಸಂಪುಟ ಮಹತ್ವದ ಅನುಮೋದನೆ

ಹುಬ್ಬಳ್ಳಿ : ದೇಶದ ಆಹಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ದೇಶಾದ್ಯಂತ 80 ಕೋಟಿಗೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಶ್ರೇಷ್ಠ ಗುಣಮಟ್ಟದ ಆಹಾರ ಧಾನ್ಯ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಮಹತ್ತರ ಬದಲಾವಣೆಗೆ ನಾಂದಿ ಹಾಡಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಗೌರವಯುತ ಆಹಾರ ಪೂರೈಕೆಗೆ ಅನುಮೋದನೆ ನೀಡಿದೆ. ಪಡಿತರದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿ ಅಕ್ಕಿ ವಿತರಣೆಯಲ್ಲಿ ಈ ಮೊದಲಿನಷ್ಟೇ ಆಹಾರದ ಪ್ರಮಾಣವನ್ನು ಕಾಯ್ದುಕೊಳ್ಳುವುದರ ಜತೆಗೆ ಅಕ್ಕಿಯ ಗುಣಮಟ್ಟವನ್ನು ಶ್ರೇಷ್ಠಗೊಳಿಸುವಲ್ಲಿ ಸಚಿವ ಪ್ರಲ್ಹಾದ ಜೋಶಿ ಆದ್ಯತೆ ನೀಡಿದ್ದಾರೆ. ಇದಕ್ಕಾಗಿ ಅಕ್ಕಿಯಲ್ಲಿನ ನುಚ್ಚಿನ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ರಾ ರೈಸ್ (Raw Rice) ಅಥವಾ ಮಾಮೂಲಿ ಅಕ್ಕಿಯಲ್ಲಿ ಈ ಮೊದಲು ಇದ್ದ ಶೇಕಡಾ 25 ರಷ್ಟು ನುಚ್ಚಿನ ಪ್ರಮಾಣವನ್ನು ಕೇವಲ ಶೇಕಡಾ 10 ಕ್ಕೆ ಇಳಿಸಲಾಗಿದ್ದು, ಒಟ್ಟಾರೆ ಶೇಕಡಾ 15 ರಷ್ಟು ನುಚ್ಚಿನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ಅದೇ ರೀತಿ, ಬೇಯಿಸಿದ ಅಕ್ಕಿಯಲ್ಲಿ (Parboiled Rice) ಈ ಮೊದಲಿದ್ದ ಶೇಕಡಾ 16 ರಷ್ಟು ನುಚ್ಚಿನ ಪ್ರಮಾಣವನ್ನು ಇದೀಗ ಶೇಕಡಾ 5 ಕ್ಕೆ ಇಳಿಸಲಾಗಿದೆ. ಈ ಮೂಲಕ ಅತ್ಯಂತ ಶ್ರೇಷ್ಠ ಗುಣಮಟ್ಟದ ಹಾಗೂ ಗಟ್ಟಿತನದ ಅಕ್ಕಿ ಪೂರೈಕೆಗೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ "ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ" ಅಕ್ಕಿ ವಿತರಣೆಯಲ್ಲಿ ಇಂತಹ ಶ್ರೇಷ್ಠ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಮಾನದಂಡಗಳನ್ನು ರೂಪಿಸಲಾಗಿದೆ. ಈ ಪ್ರಮುಖ ನಿರ್ಧಾರದಿಂದಾಗಿ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಗೌರವಯುತವಾಗಿ ಉತ್ತಮ ಗುಣಮಟ್ಟದ ಹಾಗೂ ಪೌಷ್ಟಿಕಯುತ ಆಹಾರ ದೊರೆಯುವಂತಾಗಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಯಶಸ್ವಿಯಾಗಿ ತೆಗೆದುಕೊಂಡಿದೆ.

Category
ಕರಾವಳಿ ತರಂಗಿಣಿ