image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಶಾಲೆಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿಗೆ ಬ್ರೇಕ್: ಮಕ್ಕಳ ಆರೋಗ್ಯ ಮತ್ತು ಭದ್ರತೆಗೆ ಆದ್ಯತೆ

ಬೆಂಗಳೂರು ಶಾಲೆಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿಗೆ ಬ್ರೇಕ್: ಮಕ್ಕಳ ಆರೋಗ್ಯ ಮತ್ತು ಭದ್ರತೆಗೆ ಆದ್ಯತೆ

ಬೆಂಗಳೂರು : ಮಕ್ಕಳ ಆರೋಗ್ಯ, ಸುರಕ್ಷತೆ ಹಾಗೂ ಶಾಲಾ ಶಿಸ್ತನ್ನು ಕಾಪಾಡುವ ಮಹತ್ತರ ಉದ್ದೇಶದಿಂದ ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳು ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ವಿವಿಧ ಆನ್‌ಲೈನ್ ಆಯಪ್‌ಗಳ ಮೂಲಕ ಶಾಲಾ ಆವರಣಕ್ಕೆ ಆಹಾರ ತರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲು ಮುಂದಾಗಿವೆ. ಹೊರಗಿನಿಂದ ಬರುವ ಜಂಕ್ ಫುಡ್‌ಗಳಲ್ಲಿ ಎಣ್ಣೆ, ಉಪ್ಪು ಮತ್ತು ಸಂರಕ್ಷಕ ಪದಾರ್ಥಗಳು ಹೆಚ್ಚಾಗಿರುವುದರಿಂದ ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಶಾಲಾ ಆಡಳಿತ ಮಂಡಳಿಗಳ ಆತಂಕವಾಗಿದೆ.

ಇದರೊಂದಿಗೆ, ಕೆಲವು ವಿದ್ಯಾರ್ಥಿಗಳು ಮನೆಯ ಊಟ ತರುತ್ತಿದ್ದರೆ, ಇನ್ನು ಕೆಲವರು ಪಿಜ್ಜಾ ಅಥವಾ ಬರ್ಗರ್‌ಗಳನ್ನು ಆರ್ಡರ್ ಮಾಡುವುದರಿಂದ ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಹಾಗೂ ತಾರತಮ್ಯದ ಭಾವನೆ ಮೂಡಬಹುದು ಎಂದು ಶಾಲೆಗಳು ಅಭಿಪ್ರಾಯಪಟ್ಟಿವೆ. ಭದ್ರತೆಯ ದೃಷ್ಟಿಯಿಂದಲೂ ಅಪರಿಚಿತ ಡೆಲಿವರಿ ಸಿಬ್ಬಂದಿ ನಿರಂತರವಾಗಿ ಶಾಲೆಯೊಳಗೆ ಬರುವುದು ಸೂಕ್ತವಲ್ಲ ಮತ್ತು ಇದು ಶಾಲೆಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ ಎಂದು ಪೋಷಕರಿಗೆ ತಿಳಿಸಲಾಗಿದೆ. ಹೀಗಾಗಿ ಪೋಷಕರು ಅನಿವಾರ್ಯ ಸಂದರ್ಭಗಳಲ್ಲಿ ಹೊರಗಿನ ಆಹಾರ ನೀಡಬೇಕಾಗಿ ಬಂದರೂ, ಅದನ್ನು ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸುವಂತೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೂ ಸಹ ಆನ್‌ಲೈನ್ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

Category
ಕರಾವಳಿ ತರಂಗಿಣಿ