image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದಸರಾದಲ್ಲಿ ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ

ದಸರಾದಲ್ಲಿ ಆಗಸದಲ್ಲಿ ಮೂಡಿದ ಸಹಸ್ರಾರು ಡ್ರೋನ್‌ಗಳ ಕಲರವ

ಮೈಸೂರು : ಬನ್ನಿಮಂಟಪದ ಪಂಜಿನ ಕವಾಯಾತು ಮೈದಾನದಲ್ಲಿ ನಡೆದ ಡ್ರೋನ್‌ ಶೋನಲ್ಲಿ 1500 ಡ್ರೋನ್‌ಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ರಾತ್ರಿ 7.45ಕ್ಕೆ ಆರಂಭಗೊಂಡ ಡ್ರೋನ್‌ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು. 

ಅರಮನೆ ನಗರಿಯಲ್ಲಿ ದಸರಾ ಸಂದರ್ಭದಲ್ಲಿ ಅರಮನೆಯ ದೀಪಾಲಂಕಾರದ ಜತೆಗೆ ನಗರ ತುಂಬೆಲ್ಲ ಹಾಕಿರುವ ದೀಪಾಲಂಕಾರ ನೋಡಲು ಜನಸಾಗರವೇ ಹರಿದು ಬರುತ್ತಿದ್ದು, ದಸರಾದ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡುವ ಡ್ರೋನ್‌ ಶೋ ಈ ಬಾರಿ ವಿಶೇಷವಾಗಿದೆ. 4 ದಿನಗಳ ಕಾಲ ಡ್ರೋನ್‌ ಶೋ ಇರಲಿದ್ದು, ಇದರಲ್ಲಿ ಎರಡು ದಿನ ಅ. 6 ಮತ್ತು 7 ರಂದು ಸಾರ್ವಜನಿಕರಿಗೆ ಉಚಿತ ಪ್ರವೇಶ ಇತ್ತು. ಮತ್ತೆರಡು ದಿನ ಅ.11 ಮತ್ತು ಅ.12 ರಂದು ಟಿಕೆಟ್‌ ಹೊಂದಿದವರಿಗೆ ಮಾತ್ರ ಪ್ರವೇಶ ಇರಲಿದೆ.

Category
ಕರಾವಳಿ ತರಂಗಿಣಿ