image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನೆದರ್‌ಲ್ಯಾಂಡ್‌ನ ಸಂಸ್ಥೆಗೆ ಚೌಗುಲೆ ಶಿಪ್‌ಯಾರ್ಡ್‌ನ ಮೊದಲ ಹಡಗು ಹಸ್ತಾಂತರ

ನೆದರ್‌ಲ್ಯಾಂಡ್‌ನ ಸಂಸ್ಥೆಗೆ ಚೌಗುಲೆ ಶಿಪ್‌ಯಾರ್ಡ್‌ನ ಮೊದಲ ಹಡಗು ಹಸ್ತಾಂತರ

ಬೆಂಗಳೂರು : ​ಹಡಗು ನಿರ್ಮಾಣ ಸಂಸ್ಥೆಯಾದ ಚೌಗುಲೆ ಶಿಪ್‌ ಯಾರ್ಡ್ಸ್‌ ತನ್ನ ನೂತನ ನಿರ್ಮಾಣದ ಮೊದಲ ಹಡಗು ‘ಫ್ರೀಷಿಯನ್‌ ಫ್ಯೂಚರ್‌’ ಅನ್ನು ನೆದರ್‌ಲ್ಯಾಂಡ್‌ನ ಬೂಮ್‌ಸ್ಮಾ ಸಂಸ್ಥೆಗೆ ಯಶಸ್ವಿಯಾಗಿ ಹಸ್ತಾಂತರಿಸಿದೆ. ಒಂದು ಕಾಲದಲ್ಲಿ ದೇಶದ ಅತಿದೊಡ್ಡ ಖಾಸಗಿ ಹಡಗು ನಿರ್ಮಾಣ ಘಟಕಗಳಲ್ಲಿ ಒಂದಾಗಿದ್ದ ಈ ಕೇಂದ್ರವು, ಬಳಿಕ ದಿವಾಳಿಯಾಗಿತ್ತು. ಆದರೆ ಚೌಗುಲೆ ಸಂಸ್ಥೆಯು ಈ ಘಟಕವನ್ನು ಖರೀದಿಸಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಕೇವಲ ಮೂರು ವರ್ಷಗಳ ಅವಧಿಯಲ್ಲೇ ತನ್ನ ಮೊದಲ ಹಡಗನ್ನು ವಿತರಿಸಿ ಸಾಧನೆ ಮಾಡಿದೆ.

​'ಫ್ರೀಷಿಯನ್‌ ಫ್ಯೂಚರ್‌' ಡೀಸೆಲ್‌ ಮತ್ತು ವಿದ್ಯುತ್‌ ಎರಡರಲ್ಲೂ ಸಂಚರಿಸಬಲ್ಲ ಅತ್ಯಾಧುನಿಕ ಸರಕು ಸಾಗಣೆ ಹಡಗಾಗಿದ್ದು, ಸಾಮಾನ್ಯ ಹಡಗುಗಳಿಗಿಂತ ಶೇ. 30ರಷ್ಟು ಕಡಿಮೆ ಹೊಗೆ ಹೊರಸೂಸುವ ಸಾಮರ್ಥ್ಯ ಹೊಂದಿದೆ. ಅಂತರಾಷ್ಟ್ರೀಯ ಸಾಗರ ನಿಯಂತ್ರಣ ಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟದ ಕಠಿಣ ಪರಿಸರ ನಿಯಮಾವಳಿಗಳಿಗೆ ಪೂರಕವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಸುಮಾರು 8,500 ಟನ್‌ ಸಾಮರ್ಥ್ಯದ ಈ ಹಡಗು ನೆದರ್‌ಲ್ಯಾಂಡ್‌ ಧ್ವಜದ ಅಡಿಯಲ್ಲಿ ಕಾರ್ಯಾಚರಿಸಲಿದ್ದು, ಹಿಮ ಪ್ರದೇಶಗಳಲ್ಲಿ ಸಂಚರಿಸಲು ಬೇಕಾದ ‘1ಬಿ’ ವರ್ಗದ ಮಾನದಂಡಗಳನ್ನು ಹೊಂದಿದೆ ಎಂದು ಸಂಸ್ಥೆಯ ಅರ್ಜುನ್‌ ಚೌಗುಲೆ ಮಾಹಿತಿ ನೀಡಿದ್ದಾರೆ. ಯುರೋಪಿನ ಹಡಗು ನಿರ್ವಹಣಾ ಸಂಸ್ಥೆಗಳು ಇಂತಹ ಪರಿಸರ ಸ್ನೇಹಿ ಹಡಗುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಈ ಯೋಜನೆಗೆ ಮತ್ತಷ್ಟು ಪ್ರಾಮುಖ್ಯತೆ ತಂದಿದೆ.

Category
ಕರಾವಳಿ ತರಂಗಿಣಿ