ಚಿಕ್ಕಮಗಳೂರು: ತಾಲ್ಲೂಕಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಪೂಜೆ ಗ್ರಾಮದಲ್ಲಿರುವ ಶ್ರೀ ಬಬ್ಬುಸ್ವಾಮಿ ದೇವಾಲಯದ ಮುಂದುವರಿದ ನಿರ್ಮಾಣ ಕಾಮಗಾರಿಗಾಗಿ ವಿಧಾನ ಪರಿಷತ್ ಶಾಸಕರಾದ ಡಾ. ಸಿ.ಟಿ. ರವಿ ಅವರು ಅನುದಾನದ ಚೆಕ್ಕನ್ನು ಹಸ್ತಾಂತರಿಸಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಅನುದಾನವನ್ನು ಒದಗಿಸಲಾಗಿದ್ದು, ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದೇವಾಲಯದ ಸಮಿತಿಯ ಸದಸ್ಯರಿಗೆ ಶಾಸಕರು ಅಧಿಕೃತವಾಗಿ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರ ಕಚೇರಿಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.