image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಮೀರ್ ಜೆಡಿಎಸ್ ಸೇರ್ಪಡೆ ವದಂತಿಗೆ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ: 'ಅಂತಹ ಕೆಟಗರಿ ಜನ ನಮಗೆ ಬೇಡ' ಎಂದು ಕಿಡಿ

ಜಮೀರ್ ಜೆಡಿಎಸ್ ಸೇರ್ಪಡೆ ವದಂತಿಗೆ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ: 'ಅಂತಹ ಕೆಟಗರಿ ಜನ ನಮಗೆ ಬೇಡ' ಎಂದು ಕಿಡಿ

ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಸಚಿವ ಜಮೀರ್ ಅಹಮದ್ ಖಾನ್ ಮತ್ತೆ ಜೆಡಿಎಸ್ ಸೇರುತ್ತಾರೆಂಬ ವದಂತಿಗಳಿಗೆ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜಮೀರ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ಅಂತಹ ಕೆಟಗರಿ ಜನಗಳ ಅವಶ್ಯಕತೆ ನಮಗಿಲ್ಲ" ಎಂದು ಹೇಳುವ ಮೂಲಕ ಮರು ಸೇರ್ಪಡೆಯ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. "ಯಾವುದೇ ಕಾರಣಕ್ಕೂ ಆ ವಿಷಯವನ್ನು ನನ್ನ ಮುಂದೆ ಎತ್ತಬೇಡಿ, ರಾಜಕೀಯ ಲಾಭಕ್ಕಾಗಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ನಾನು ಕೈ ಹಾಕುವುದಿಲ್ಲ" ಎಂದು ಎಚ್ಚರಿಸಿದ ಕುಮಾರಸ್ವಾಮಿ, ಈ ಹಿಂದೆ ಜಮೀರ್ ಅವರಿಂದ ಆದ ಕಹಿ ಅನುಭವಗಳನ್ನು ನೆನಪಿಸಿಕೊಂಡರು. ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್ಸಿಗರು ಅನ್ನ ತಿನ್ನುತ್ತಿರುವುದು ಒಂದು ನಿರ್ದಿಷ್ಟ ವರ್ಗದಿಂದಲೇ" ಎಂಬ ಜಮೀರ್ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಶ್ನಿಸದ ಕಾಂಗ್ರೆಸ್ ನಾಯಕರ ನಡೆಯನ್ನು ಟೀಕಿಸಿದರು. ಒಟ್ಟಾರೆ ಜಮೀರ್ ಮರುಳುವಿಕೆ ವಿಚಾರಕ್ಕೆ ಎಚ್‌ಡಿಕೆ ಹಾಕಿರುವ ಈ 'ಬ್ರೇಕ್' ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Category
ಕರಾವಳಿ ತರಂಗಿಣಿ