image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುವುದು ಗೊತ್ತು ಹಾಗೂ ಕೆಳಗೆ ಇಳಿಸುವುದೂ ಗೊತ್ತು!

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುವುದು ಗೊತ್ತು ಹಾಗೂ ಕೆಳಗೆ ಇಳಿಸುವುದೂ ಗೊತ್ತು!

ಮುಳಬಾಗಿಲು : ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡುವುದು ಗೊತ್ತು ಹಾಗೂ ಕೆಳಗೆ ಇಳಿಸುವುದೂ ಗೊತ್ತು. ಮುಂದೆ ಎಲ್ಲಾ ಮುಸಲ್ಮಾನರು ನ್ಯಾಯ ಸಿಗುವವರೆಗೆ ಪಕ್ಷಾತೀತವಾಗಿ ನಸೀರ್‌ ಅಹಮದ್‌ ಪರ ನಿಲ್ಲಬೇಕು ಹಾಗೂ ಕಾಂಗ್ರೆಸ್ ನಡೆಯನ್ನು ಖಂಡಿಸಬೇಕು ಎಂದು ನಗರದಲ್ಲಿ ಮುಸ್ಲಿಂ ಉಲೇಮಾಗಳು ಹೇಳಿದರು. ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್‌ ಅಹಮದ್‌ ಅವರನ್ನು ವಜಾ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಉಲೇಮಾಗಳು ಮುಸ್ಲಿಂ ಮುಖಂಡರ ಸಭೆ ನಡೆಸಿ ಮಾತನಾಡಿದರು.

ನಗರದ 10ನೇ ನಂಬರ್ ಕಲ್ಯಾಣ ಮಂಟಪದಲ್ಲಿ ಉಲೇಮಾಗಳಾದ ಕೋಲಾರದ ಮೌಲಾನ ಖಲೀಮುಲ್ಲಾ, ಮೊಹಮದ್‌ ಅಸಾದುಲ್ಲಾ ಹಾಗೂ ಆಲಂಗೀರ್ ಪಕ್ಷಾತೀತವಾಗಿ ಮುಸ್ಲಿಂ ಮುಖಂಡರ ಸಭೆಯನ್ನು ನಡೆಸಿ ಕಾಂಗ್ರೆಸ್ ನಡೆಯನ್ನು ವಿರೋಧಿಸಿದರು. ಮುಸಲ್ಮಾನರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಳೆಸುತ್ತಾ, ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಹೀಗಿರುವಾಗ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಇದರಿಂದ ನಸೀರ್ ಅಹಮದ್‌ ಬೇಸರದಿಂದ ಸಮರ್ಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಲಿಲ್ಲ ಎಂಬ ನೆಪ ಇಟ್ಟುಕೊಂಡು ಹುದ್ದೆಯಿಂದ ವಜಾ ಮಾಡಿರುವುದು ಖಂಡನೀಯ ಎಂದರು.

Category
ಕರಾವಳಿ ತರಂಗಿಣಿ