image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಿಎಂ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು, ಆದ್ರೆ ಕರೆಯಲ್ವಲ್ಲ!: ಪರೋಕ್ಷವಾಗಿ ಆಸೆ ಬಿಚ್ಚಿಟ್ಟ ಪರಮೇಶ್ವರ್

ಸಿಎಂ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು, ಆದ್ರೆ ಕರೆಯಲ್ವಲ್ಲ!: ಪರೋಕ್ಷವಾಗಿ ಆಸೆ ಬಿಚ್ಚಿಟ್ಟ ಪರಮೇಶ್ವರ್

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬರುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು, ಆದರೆ ಅರ್ಜಿಯನ್ನೇ ಕರೆಯುವುದಿಲ್ಲವಲ್ಲ ಎನ್ನುವ ಮೂಲಕ ತಾವೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಇಂಗಿತವನ್ನು ಅವರು ಪರೋಕ್ಷವಾಗಿ ಹೊರಹಾಕಿದ್ದಾರೆ.

​ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಆಸೆ ಇದೆ ಎಂದು ನಿಮಗೆ ಯಾರು ಹೇಳಿದರು? ನಮ್ಮ ಪಕ್ಷದಲ್ಲಿ ಏನೇ ತೀರ್ಮಾನ ಆಗಬೇಕಾದರೂ ಅದನ್ನು ಹೈಕಮಾಂಡ್ ಮಾಡುತ್ತದೆ. ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ, ಯಾರಿಗೆ ಅರ್ಹತೆ ಇದೆ, ಯಾರಿಗೆ ಅರ್ಹತೆ ಇಲ್ಲ ಎಂಬುದು ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

​ಮುಂದುವರಿದು ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಎಲ್ಲಾ 136 ಶಾಸಕರಿಗೂ ಸಚಿವರಾಗಲು ಅರ್ಹತೆ ಇದೆ. ಆದರೆ, ಅದರಲ್ಲಿ ಸಚಿವರನ್ನಾಗಿ ಮಾಡುವುದು ಕೇವಲ ಶೇ. 15 ರಷ್ಟು ಮಂದಿಯನ್ನು ಮಾತ್ರ. ಈಗಿರುವ ಮಂತ್ರಿಗಳನ್ನು ಸಂಪುಟ ಪುನರ್ ರಚನೆಯಲ್ಲಿ ಬದಲಾಯಿಸಿ, ಬೇರೆಯವರಿಗೆ ಮಂತ್ರಿ ಸ್ಥಾನ ನೀಡುವುದು ಎಲ್ಲಾ ಸರ್ಕಾರದಲ್ಲೂ ಆಗುವಂತದ್ದೇ. ಹೀಗಾಗಿ, ಎರಡು-ಮೂರು ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೆ ಅರ್ಹತೆ ಇರುವುದರಿಂದಲೇ ಕೇಳುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ