image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದಲ್ಲಿ 'ಯುವ ಆಪದ್ ಮಿತ್ರ' ತರಬೇತಿ ಶಿಬಿರ ಉದ್ಘಾಟನೆ

ಶಿವಮೊಗ್ಗದಲ್ಲಿ 'ಯುವ ಆಪದ್ ಮಿತ್ರ' ತರಬೇತಿ ಶಿಬಿರ ಉದ್ಘಾಟನೆ

​ಶಿವಮೊಗ್ಗ: ವಿಪತ್ತು ಸಂದರ್ಭಗಳಲ್ಲಿ ಪ್ರಾಣ ಮತ್ತು ಆಸ್ತಿ ಹಾನಿ ತಡೆಗಟ್ಟಲು ಯುವ ಸ್ವಯಂ ಸೇವಕರಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ 'ಯುವ ಆಪದ್ ಮಿತ್ರ'ಕ್ಕೆ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕಮಾಂಡಿಂಗ್ ಆಫೀಸರ್ ಲೆಪ್ಟಿನೆಂಟ್ ಕರ್ನಲ್ ಮಾಣಿಕ್ ಪಟಾನಿಯಾ ಅವರು, ಪ್ರವಾಹ ಮತ್ತು ಭೂಕಂಪದಂತಹ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಈ ತರಬೇತಿಯು ಯುವಜನರಿಗೆ ಅಗತ್ಯ ಕೌಶಲ್ಯ ನೀಡಲಿದೆ ಎಂದು ತಿಳಿಸಿದರು.

​ಕೇಂದ್ರ ಗೃಹ ಮಂತ್ರಾಲಯ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇದನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಜಿಲ್ಲೆಯ 300 ಎನ್‌ಸಿಸಿ ಕೆಡೆಟ್‌ಗಳು ಈ ಒಂದು ವಾರದ ಶಿಬಿರದಲ್ಲಿ ಭಾಗವಹಿಸಲಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಪಡೆಯಲಿದ್ದಾರೆ.

​ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಕ್ತ ಕೆ.ರವಿ ಅವರು ತರಬೇತಿಯ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಆರ್.ಕೆ ಶಂಕರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ.ವಿ ಉಪಸ್ಥಿತರಿದ್ದರು. ಈ ಶಿಬಿರದ ಮೂಲಕ ತರಬೇತಿ ಪಡೆದ ಕೆಡೆಟ್‌ಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

Category
ಕರಾವಳಿ ತರಂಗಿಣಿ