image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

​'ಕಾರ್ಪೊರೇಟ್ ಜಿಹಾದ್' ಕುರಿತು ಗಂಭೀರ ತನಿಖೆಯಾಗಲಿ: ಡಾ. ಸಿ.ಟಿ. ರವಿ ಆಗ್ರಹ

​'ಕಾರ್ಪೊರೇಟ್ ಜಿಹಾದ್' ಕುರಿತು ಗಂಭೀರ ತನಿಖೆಯಾಗಲಿ: ಡಾ. ಸಿ.ಟಿ. ರವಿ ಆಗ್ರಹ

​ಬೆಂಗಳೂರು: ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಸಂಸ್ಥೆಯಲ್ಲಿ ಬೆಳಕಿಗೆ ಬಂದಿರುವ ‘ಲವ್ ಜಿಹಾದ್’ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಒತ್ತಾಯಿಸಿದ್ದಾರೆ.

​ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವು ಕೇವಲ ನಾಸಿಕ್‌ಗೆ ಸೀಮಿತವಾಗಿರದೆ ದೇಶವ್ಯಾಪಿ ಹರಡಿರುವ ಸಂಘಟಿತ ಜಾಲವಾಗಿರುವ ಸಾಧ್ಯತೆಯಿದೆ. ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಶ್ಲಾಘಿಸಿದರು.

ಕರ್ನಾಟಕದಲ್ಲೂ ಇಂತಹ ಸಂಘಟಿತ ಜಾಲ ಇರುವ ಸಾಧ್ಯತೆಯಿದೆ ಎಂದು ಶಂಕಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 44,826 ವಯಸ್ಕ ಮಹಿಳೆಯರು ಮತ್ತು 6,894 ಬಾಲಕಿಯರು ನಾಪತ್ತೆಯಾಗಿರುವ ವರದಿಗಳನ್ನು ಉಲ್ಲೇಖಿಸಿದರು. ವಿಶೇಷವಾಗಿ ಬೆಂಗಳೂರಿನಿಂದಲೇ 2,290 ಬಾಲಕಿಯರು ನಾಪತ್ತೆಯಾಗಿರುವುದು ಗಂಭೀರ ಚಿಂತೆಯ ವಿಷಯವಾಗಿದೆ ಎಂದರು.

'ಲವ್ ಜಿಹಾದ್' ಅನ್ನು ಕೇವಲ ವೈಯಕ್ತಿಕ ಘಟನೆ ಎಂದು ಪರಿಗಣಿಸದೆ, ಇದನ್ನು ಹಣಕಾಸು ಮತ್ತು ಮತಾಂತರದ ಉದ್ದೇಶ ಹೊಂದಿರುವ ಸಂಘಟಿತ ಜಾಲವಾಗಿ ನೋಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿ, ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಮಹಿಳಾ ಮೀಸಲಾತಿ ಬಿಲ್‌ ಅನ್ನು ಸ್ವಾಗತಿಸಿದ ಸಿ.ಟಿ. ರವಿ ಅವರು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಹೆಜ್ಜೆ ಹಾಗೂ ಅಂಬೇಡ್ಕರ್ ಅವರ ಸಮಾನತೆಯ ಕನಸಿನ ಸಾಕಾರ ಎಂದರು. ದಕ್ಷಿಣ ಭಾರತಕ್ಕೆ ಕ್ಷೇತ್ರ ಮರುವಿಂಗಡಣೆಯಿಂದ ಅನ್ಯಾಯವಾಗುತ್ತದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದರು. ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ ಮತ್ತು ದೇಶಾದ್ಯಂತ ಒಂದೇ ಮಾನದಂಡ ಅನುಸರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ