image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಮುಖ್ಯಮಂತ್ರಿ ಬದಲಾವಣೆ ಕುರಿತು ನಾನು ಮತ್ತು ಸಿದ್ದರಾಮಯ್ಯ, ನಮ್ಮಿಬ್ಬರ ಹೇಳಿಕೆಗಳಿಗೆ ಮಾತ್ರ ಬೆಲೆ. ಉಳಿದವರ ಹೇಳಿಕೆಗಳು ನಗಣ್ಯ : ಡಿ.ಕೆ.ಶಿ

'ಮುಖ್ಯಮಂತ್ರಿ ಬದಲಾವಣೆ ಕುರಿತು ನಾನು ಮತ್ತು ಸಿದ್ದರಾಮಯ್ಯ, ನಮ್ಮಿಬ್ಬರ ಹೇಳಿಕೆಗಳಿಗೆ ಮಾತ್ರ ಬೆಲೆ. ಉಳಿದವರ ಹೇಳಿಕೆಗಳು ನಗಣ್ಯ : ಡಿ.ಕೆ.ಶಿ

ಹುಬ್ಬಳ್ಳಿ : 'ಮುಖ್ಯಮಂತ್ರಿ ಬದಲಾವಣೆ ಕುರಿತು ನಾನು ಮತ್ತು ಸಿದ್ದರಾಮಯ್ಯ, ನಮ್ಮಿಬ್ಬರ ಹೇಳಿಕೆಗಳಿಗೆ ಮಾತ್ರ ಬೆಲೆ. ಉಳಿದವರ ಹೇಳಿಕೆಗಳು ನಗಣ್ಯ. ಇನ್ನುಳಿದವರ ಯಾರ ಹೇಳಿಕೆಗಳಿಗೂ ನಾನು ಉತ್ತರಿಸುವ ಅವಶ್ಯಕತೆ ಇಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.2028ರವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ಧರಾಮಯ್ಯ ಅವರೇ ಮುಂದುವರೆಯಲಿದ್ದಾರೆ ಎಂಬ ವಸತಿ ಸಚಿವ ಜಮೀರ್‌ ಅಹದ್ಮದ್ ಖಾನ್‌ ಚುನಾವಣಾ ಪ್ರಚಾರದ ವೇಳೆ ಮತ್ತು ಮೈಸೂರಿನಲ್ಲಿ ಗೃಹ ಸಚಿವ ಪರಮೇಶ್ವರ್‌ ಹೇಳಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. '2028ರ ವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ' ಎಂಬ ಸಚಿವ ಜಮೀರ್‌ ಅಹ್ಮದ ಖಾನ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬದಲಾವಣೆ ಕುರಿತು ನಮ್ಮಿಬ್ಬರ ಬಿಟ್ಟು ಬೇರೆಯವರ ಹೇಳಿಕೆಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು. ಮುಂದುವರಿದು, 'ನನ್ನ ತಾಳ್ಮೆಗೆ ಕಾಲವೇ ಮುಂದೊಂದು ದಿನ ಉತ್ತರ ಕೊಡಲಿದೆ' ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಪರಮೇಶ್ವರ್‌, '2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ಐದು ವರ್ಷ ಸಿಎಂ ಆಗಿದ್ದರು ತಾನೇ?. ಈ ಬಾರಿಯೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿತ್ತು. ಅದರ ಅವಧಿ 2028, ಅದನ್ನ ಮುಗಿಸಬೇಕು ತಾನೇ?. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು.

Category
ಕರಾವಳಿ ತರಂಗಿಣಿ