ಬೆಂಗಳೂರು : ಹೊಸ ವರ್ಷದ ಆರ್ಥಿಕ ವರ್ಷದ ಆರಂಭದ ದಿನದಿಂದಲೇ ರಾಜ್ಯದ ಜನತೆಗೆ ಪವರ್ - ವಾಟರ್ ಶಾಕ್ ಆಗಲಿದೆ. ಯಾಕೆಂದರೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಏ. 1ರಿಂದ ಹೊಸ ದರ ಜಾರಿಗೆ ತರುವ ಬಗ್ಗೆ ಅಂತಿಮ ಹಂತದ ಚರ್ಚೆಯಲ್ಲಿ ತೊಡಗಿದೆ.ಯೂನಿಟ್‌ಗೆ 40 ರಿಂದ 50 ಪೈಸೆ ಹೆಚ್ಚಳ ಸಾಧ್ಯತೆ ಇದೆ. ಬೆಸ್ಕಾಂ ಸೇರಿದಂತೆ ಐದು ಎಸ್ಕಾಂಗಳ ಪ್ರಸ್ತಾವನೆಯಂತೆ ಪ್ರತಿ ಯೂನಿಟ್ ವಿದ್ಯುತ್‌ಗೆ ಸುಮಾರು 40 ರಿಂದ 50 ಪೈಸೆವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳು ಆದಾಯದ ಕೊರತೆ ಸರಿಪಡಿಸಲು ಈ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಗೃಹ ಬಳಕೆದಾರರು, ವಾಣಿಜ್ಯ ಬಳಕೆದಾರರು ಹಾಗೂ ಕೈಗಾರಿಕಾ ಕ್ಷೇತ್ರದ ಮೂರು ವರ್ಗಗಳಿಗೂ ದರ ಏರಿಕೆಯ ನೇರ ಪರಿಣಾಮ ಬೀಳಲಿದೆ.
ಗೃಹ ಜ್ಯೋತಿ ಫಲಾನುಭವಿಗಳಿಗೆ ವಿನಾಯಿತಿ ಸಿಗುವ ಸಾಧ್ಯತೆಗಳಿವೆ. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ಗ್ರಾಹಕರ ಬಿಲ್ ಅನ್ನು ಸರ್ಕಾರವೇ ಭರಿಸುವುದರಿಂದ ಅವರಿಗೆ ನೇರ ಹೊರೆ ಇರುವುದಿಲ್ಲ. ಆದರೆ 200 ಯೂನಿಟ್ ಮೀರಿದ ಬಳಕೆದಾರರು ಹೆಚ್ಚಿದ ದರವನ್ನು ಪಾವತಿಸಬೇಕಾಗುತ್ತದೆ.ಸ್ಥಿರ ಶುಲ್ಕವೂ ಏರಿಕೆ ಸಾಧ್ಯತೆಯೂನಿಟ್ ದರ ಮಾತ್ರವಲ್ಲದೆ, ಸ್ಥಿರ ಶುಲ್ಕವನ್ನೂ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ.ವಾಣಿಜ್ಯ ವಿದ್ಯುತ್ ದರ ಏರಿಕೆಯಾದರೆ ಹೋಟೆಲ್, ಸಣ್ಣ ಕೈಗಾರಿಕೆಗಳ ಉತ್ಪಾದನಾ ವೆಚ್ಚ ಹೆಚ್ಚಾಗಿ, ಅದರ ಪರಿಣಾಮವಾಗಿ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ ಇದೆ. ಇದರ ಜೊತೆಗೆ ಏ. 1ರಿಂದ ಬೆಂಗಳೂರಿನಲ್ಲಿ ನೀರಿನ ಬಿಲ್ಲಿನಲ್ಲೂ ಶೇ. 3ರಷ್ಟು ಹೆಚ್ಚಳ ಜಾರಿಗೆ ಬರಲಿದೆ.ನೀರಿನ ಸರಬರಾಜು ವೆಚ್ಚ ಹೆಚ್ಚಳ.ನಿರ್ವಹಣಾ ವೆಚ್ಚ ಏರಿಕೆವಿದ್ಯುತ್ ಮತ್ತು ಮೂಲಸೌಕರ್ಯ ಖರ್ಚು ಹೆಚ್ಚಳ. ಜಲಮಂಡಳಿಯ ಆರ್ಥಿಕ ಒತ್ತಡ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷವೇ ಪ್ರತಿವರ್ಷ ನೀರಿನ ದರವನ್ನು ಶೇ. 3ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದ್ದು, ಅದರ ಭಾಗವಾಗಿ ಈ ವರ್ಷದ ಏರಿಕೆ ಜಾರಿಯಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಏಪ್ರಿಲ್ 1ರಿಂದ ವಿದ್ಯುತ್ ಹಾಗೂ ನೀರಿನ ದರ ಏರಿಕೆಯಿಂದ ಬೆಂಗಳೂರಿನ ಜನತೆಗೆ ದ್ವಿಗುಣ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ನಡುವೆಯೇ ಈ ದರ ಏರಿಕೆ ಜನರಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.