image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ ಸಚಿವ ಕೆ.ಹೆಚ್​.ಮುನಿಯಪ್ಪ

ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ ಸಚಿವ ಕೆ.ಹೆಚ್​.ಮುನಿಯಪ್ಪ

ಬೆಂಗಳೂರು : ಗಲ್ಫ್ ಯುದ್ಧವೂ 30ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕರುನಾಡಲ್ಲಿ ಸಮರದ ಎಫೆಕ್ಟ್ ಬೀರಿದ್ದು, ಅಡುಗೆ ಅನಿಲ ಅಭಾವ ಮುಂದುವರಿದಿದೆ. ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಥಂಡಾ ಹೊಡೆದಿವೆ. ಜನರು ಖಾಲಿ ಗ್ಯಾಸ್​ ಸಿಲಿಂಡರ್​ ಹಿಡಿದು ಏಜೆನ್ಸಿಗಳತ್ತ ಧಾವಿಸುತ್ತಿದ್ದಾರೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ, ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ಸಿಲಿಂಡರ್​ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ಅವರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸಿಲಿಂಡರ್​ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ. ಡಿಸ್ಟ್ರಿಬ್ಯೂಟರ್​ಗಳ ಮೇಲೆ ದೂರು ಬರುತ್ತಿವೆ. ಡೊಮೆಸ್ಟಿಕ್ ಸಿಲಿಂಡರ್ ಈ ಹಿಂದಿನಂತೆ ಮುಂದುವರಿಯುತ್ತೆ. ಆಯಿಲ್ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಬೇಕು. ಸಿಲಿಂಡರ್​ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್​ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ. ಕೆಲವು ಅನಿಲ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಎಲ್ಲಾ LPG ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕು. ಹೆಚ್ಚುವರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದರ ಮೂಲಕ ಪರವಾನಗಿ ರದ್ದು ಮಾಡಲಾಗುವುದು. LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಕೇಸ್ ದಾಖಲಾಗಿವೆ. ವಾಣಿಜ್ಯ ಉದ್ದೇಶಕ್ಕೆ ಬಳಸ್ತಿದ್ದ 1603 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ