image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಂಗ್ರೆಸ್‌ಗೆ ಸಂಕಟ ಕೊಟ್ಟ ಜನಪರ ಯೋಜನೆಗಳು: ಸಿ.ಟಿ. ರವಿ

ಕಾಂಗ್ರೆಸ್‌ಗೆ ಸಂಕಟ ಕೊಟ್ಟ ಜನಪರ ಯೋಜನೆಗಳು: ಸಿ.ಟಿ. ರವಿ

ಚಿಕ್ಕಮಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗಳಲ್ಲಿ ಬಿಜೆಪಿ ಸಂಘಟಿತರಾಗಿ ಕೆಲಸ ಮಾಡುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದರು. ಐದು ರಾಜ್ಯಗಳ ಚುನಾವಣೆಯ ಜವಾಬ್ದಾರಿಯನ್ನು ಹೈಕಮಾಂಡ್ ನನಗೆ ನೀಡಿದ್ದು, ಅದರಂತೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ ಎಂದು ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

​ದಾವಣಗೆರೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರು ಹಿಂದೆ ಸರಿದಿದ್ದು ಅನಿರೀಕ್ಷಿತವಲ್ಲ ಎಂದು ರವಿ ಹೇಳಿದರು. "ಕಾಂಗ್ರೆಸ್‌ನಲ್ಲೂ ಸಾಂಪ್ರದಾಯಿಕ ಮತ ಬ್ಯಾಂಕ್ ಇದೆ. ಉಪಚುನಾವಣೆಗಳಲ್ಲಿ ಸರ್ಕಾರವೇ ಬಂದು ಕೂತು ಪ್ರಚಾರ ಮಾಡುವುದು ಸಾಮಾನ್ಯ. ಇಲ್ಲದ ಆಶ್ವಾಸನೆಗಳನ್ನು ನೀಡುವುದೂ ಇರುತ್ತದೆ. ಆದರೆ ಜನಾಕ್ರೋಶ ನಮಗೆ ಗೋಚರಿಸುತ್ತಿದ್ದು, ಇದು ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ," ಎಂದು ಅವರು ಹೇಳಿದರು. ಉಪಚುನಾವಣೆ ಫಲಿತಾಂಶವು ಸರ್ಕಾರದ ಮೇಲೆ ತಕ್ಷಣದ ಪರಿಣಾಮ ಬೀರದಿದ್ದರೂ, ಜನಾಕ್ರೋಶ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಅವರು ಭವಿಷ್ಯ ನುಡಿದರು.

​ಪೆಟ್ರೋಲ್ ಬೆಲೆ ಇಳಿಕೆ: ಕೇಂದ್ರದ ನಿರ್ಧಾರವನ್ನು ಶ್ಲಾಘಿಸಿದ ರವಿ

​ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಅಕ್ರಮಗಳಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದ ಸಿ.ಟಿ. ರವಿ, "ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 10 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಇದರಿಂದ ಜನರು ಸಂತೋಷಪಟ್ಟಿದ್ದಾರೆ," ಎಂದು ಹೇಳಿದರು. ಭಾರತದ 90% ಪೆಟ್ರೋಲ್ ಆಮದಾಗುತ್ತಿದ್ದು, ವಿಶ್ವದಾದ್ಯಂತ ಯುದ್ಧ ಮತ್ತು ಇತರ ಕಾರಣಗಳಿಂದ ತೈಲ ಬೆಲೆ ಹೆಚ್ಚಾಗುತ್ತಿದೆ. ಆದರೂ ಕೇಂದ್ರ ಸರ್ಕಾರ ತೆರಿಗೆ ಇಳಿಸಿರುವುದು ಶ್ಲಾಘನೀಯ. "ಜನರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬುದು ಮೋದಿ ಸರ್ಕಾರದ ನಿಲುವು. ಸರ್ಕಾರದ ಖಜಾನೆಗೆ ಆದಾಯ ಕಡಿಮೆಯಾದರೂ ಪರವಾಗಿಲ್ಲ ಎಂಬುದು ಬಿಜೆಪಿಯ ಧೋರಣೆ," ಎಂದು ಅವರು ತಿಳಿಸಿದರು. ಪೆಟ್ರೋಲ್ ಬೆಲೆ ಇಳಿಕೆಯನ್ನು ಸ್ವಾಗತಿಸುವ ಬದಲು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ರವಿ ಟೀಕಿಸಿದರು.

Category
ಕರಾವಳಿ ತರಂಗಿಣಿ