image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಅನುಕಂಪದ ಆಧಾರದ ನೇಮಕಾತಿ' ಎಂಬುದು ವಾರಸುದಾರರ ಜನ್ಮಸಿದ್ಧ ಹಕ್ಕಲ್ಲ : ಹೈಕೋರ್ಟ್

'ಅನುಕಂಪದ ಆಧಾರದ ನೇಮಕಾತಿ' ಎಂಬುದು ವಾರಸುದಾರರ ಜನ್ಮಸಿದ್ಧ ಹಕ್ಕಲ್ಲ : ಹೈಕೋರ್ಟ್

ಬೆಂಗಳೂರು : ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದವರಿಗೆ ನೀಡಲಾಗುವ 'ಅನುಕಂಪದ ಆಧಾರದ ನೇಮಕಾತಿ' ಎಂಬುದು ವಾರಸುದಾರರ ಜನ್ಮಸಿದ್ಧ ಹಕ್ಕಲ್ಲ ಅಥವಾ ಅದು ಪಿತ್ರಾರ್ಜಿತವಾಗಿ ಬರುವ ಉತ್ತರಾಧಿಕಾರದ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅನುಕಂಪದ ನೇಮಕಾತಿಯ ಉದ್ದೇಶವು ಕುಟುಂಬದ ಯಜಮಾನನ ಸಾವಿನ ನಂತರ ಎದುರಾಗುವ ಹಠಾತ್ ಆರ್ಥಿಕ ಬಿಕ್ಕಟ್ಟಿನಿಂದ ಆ ಕುಟುಂಬವನ್ನು ರಕ್ಷಿಸುವುದೇ ಹೊರತು, ಅದನ್ನು ಕೆಲಸ ಪಡೆಯುವ ಹಕ್ಕಾಗಿ ಬಳಸಲಾಗದು. 'ಅವಲಂಬಿತ' ಎಂದರೆ ಆರ್ಥಿಕವಾಗಿ ಸಂಪೂರ್ಣವಾಗಿ ಮೃತಪಟ್ಟವರ ಮೇಲೆ ಅವಲಂಬಿತರಾದವರು ಎಂದರ್ಥ. ನೌಕರ ಮೃತಪಟ್ಟು 20 ವರ್ಷಗಳ ನಂತರ ಉದ್ಯೋಗ ನೀಡುವುದು ಅನುಕಂಪದ ನೇಮಕಾತಿಯ ಮೂಲ ಉದ್ದೇಶಕ್ಕೆ (ತಕ್ಷಣದ ಪರಿಹಾರ) ವಿರುದ್ಧವಾಗಿದೆ ಎಂದು ಹೈ ಕೋರ್ಟ್ ಹೇಳಿದೆ.

Category
ಕರಾವಳಿ ತರಂಗಿಣಿ