image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿತ್ತೀಯ ಆರೋಗ್ಯ ಸೂಚ್ಯಂಕ 2026ರ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

ವಿತ್ತೀಯ ಆರೋಗ್ಯ ಸೂಚ್ಯಂಕ 2026ರ ಪಟ್ಟಿಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ

ನವದೆಹಲಿ : ನೀತಿ ಆಯೋಗ್​ನ ವಿತ್ತೀಯ ಆರೋಗ್ಯ ಸೂಚ್ಯಂಕ 2026ರ ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನ ಪಡೆದಿದೆ. 18 ಪ್ರಮುಖ ರಾಜ್ಯಗಳನ್ನು ಈ ಇಂಡೆಕ್ಸ್​ನಲ್ಲಿ ಸೇರಿಸಲಾಗಿದೆ. ಇದರಲ್ಲಿ ಅಚೀವರ್, ಫ್ರಂಟ್ ರನ್ನರ್, ಪರ್ಫಾರ್ಮರ್, ಆಸ್ಪಿರೇಶನಲ್ ಎನ್ನುವ ನಾಲ್ಕು ಶ್ರೇಣಿಗಳನ್ನು ಮಾಡಲಾಗಿದೆ. ಅಗ್ರ ಮೂರು ರಾಜ್ಯಗಳು ಅಚೀವರ್ ಶ್ರೇಣಿ ಪಡೆದರೆ, 4ರಿಂದ 9ನೇ ಸ್ಥಾನದಲ್ಲಿರುವ ರಾಜ್ಯಗಳು ಫ್ರಂಟ್ ರನ್ನರ್ ಶ್ರೇಣಿಯಲ್ಲಿವೆ. 10-14ರ ಸ್ಥಾನದಲ್ಲಿರುವ ಐದು ರಾಜ್ಯಗಳು ಪರ್ಫಾರ್ಮರ್ ಎನಿಸಿವೆ. ಉಳಿದವು ಆಸ್ಪಿರೇಶನಲ್ ರಾಜ್ಯಗಳಾಗಿವೆ.

ಹಿಂದುಳಿದ ರಾಜ್ಯಗಳಲ್ಲೊಂದೆಂದು ಕರೆಯಿಸಿಕೊಳ್ಳುವ ಒಡಿಶಾ ಹಣಕಾಸು ಆರೋಗ್ಯ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದು ಅಚ್ಚರಿ ಮೂಡಿಸಿದೆ. ಒಡಿಶಾ ಜೊತೆ ಗೋವಾ ಮತ್ತು ಜಾರ್ಖಂಡ್ ರಾಜ್ಯಗಳು ಅಚೀವರ್ ಶ್ರೇಣಿ ಪಡೆದಿವೆ. ಪಂಜಾಬ್ ರಾಜ್ಯ ಕೊನೆಯ ಸ್ಥಾನ ಪಡೆದಿದೆ. ಈ 18 ರಾಜ್ಯಗಳನ್ನು ಹೊರತುಪಡಿಸಿ, ಉಳಿದ ಈಶಾನ್ಯ ಮತ್ತು ಹಿಮಾಲಯ ಭಾಗದ ರಾಜ್ಯಗಳನ್ನು ಪ್ರತ್ಯೇಕ ಪಟ್ಟಿಗೆ ಸೇರಿಸಲಾಗಿದೆ. ಈ ಪ್ರತ್ಯೇಕ ಪಟ್ಟಿಯಲ್ಲಿ ಅರುಣಾಚಲಪ್ರದೇಶ ಅಗ್ರಕ್ರಮಾಂಕ ಪಡೆದಿದೆ. 2023-24ರ ಸಾಲಿನ ವರ್ಷದ ದತ್ತಾಂಶದ ಆಧಾರದ ಮೇಲೆ ಫಿಸ್ಕಲ್ ಹೆಲ್ತ್ ಇಂಡೆಕ್ಸ್ 2026 ರೂಪಿಸಲಾಗಿದೆ.

ಒಡಿಶಾ: 73.1, ಗೋವಾ: 54.7, ಜಾರ್ಖಂಡ್: 50.5, ಗುಜರಾತ್: 49.9, ಮಹಾರಾಷ್ಟ್ರ: 45, ಛತ್ತೀಸ್​ಗಡ್: 44.3, ತೆಲಂಗಾಣ: 44.3, ಉತ್ತರಪ್ರದೇಶ: 41.9, ಕರ್ನಾಟಕ: 41.7, ಮಧ್ಯಪ್ರದೇಶ: 37.8, ಹರ್ಯಾಣ: 34.5, ಬಿಹಾರ: 30.9, ತಮಿಳುನಾಡು: 29.8, ರಾಜಸ್ಥಾನ್: 27.6, ಕೇರಳ: 24.8, ಪಶ್ಚಿಮ ಬಂಗಾಳ: 23.8, ಆಂಧ್ರಪ್ರದೇಶ: 23.1, ಪಂಜಾಬ್: 12.4 ಕ್ರಮವಾಗಿ ಪಟ್ಟಿಯಲ್ಲಿವೆ.

Category
ಕರಾವಳಿ ತರಂಗಿಣಿ