image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಅನುದಾನದಲ್ಲಿ ಗ್ಯಾರಂಟಿಗೆ ವರ್ಗಾಯಿಸಿದ ₹25 ಸಾವಿರ ಕೋಟಿ ವಾಪಸ್‌ ಪಡೆಯಬೇಕು : ದಲಿತ ಸಂಘರ್ಷ ಸಮಿತಿ

'ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಅನುದಾನದಲ್ಲಿ ಗ್ಯಾರಂಟಿಗೆ ವರ್ಗಾಯಿಸಿದ ₹25 ಸಾವಿರ ಕೋಟಿ ವಾಪಸ್‌ ಪಡೆಯಬೇಕು : ದಲಿತ ಸಂಘರ್ಷ ಸಮಿತಿ

ಬೆಂಗಳೂರು : 'ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಮೀಸಲಿರುವ ಶೇ 24.1ರಷ್ಟು ಅನುದಾನದಲ್ಲಿ ಗ್ಯಾರಂಟಿಗೆ ವರ್ಗಾಯಿಸಿದ ₹25 ಸಾವಿರ ಕೋಟಿ ವಾಪಸ್‌ ಪಡೆಯಬೇಕು ಎಂಬುದೂ ಸೇರಿದಂತೆ 16 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ (ಕೃಷ್ಣಪ್ಪ ಬಣ) ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು. 'ಪರಿಶಿಷ್ಟ ಜಾತಿಯವರಿಗೆ ಶೇ 17, ಪರಿಶಿಷ್ಟ ವರ್ಗದವರಿಗೆ ಶೇ 7ರಷ್ಟು ಮೊತ್ತವನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿ ಮೀಸಲಿಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದನ್ನು ಗ್ಯಾರಂಟಿ ಸಹಿತ ಬೇರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ. ದುರ್ಬಳಕೆ ತಪ್ಪಿಸಲು ಕಾಯ್ದೆಯ ಸೆಕ್ಷನ್ 7ಸಿ ತೆಗೆದು ಹಾಕಬೇಕು' ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. 'ನಿವೇಶನ ಖರೀದಿಸಲು ₹5 ಲಕ್ಷ ಹಾಗೂ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ₹5 ಲಕ್ಷ ಸಹಾಯಧನ ನೀಡಬೇಕು' ಎಂದು ಆಗ್ರಹಿಸಿದರು.

'ಆದಿವಾಸಿ ಕುಟುಂಬಗಳಿಗೆ 'ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ' ಯೋಜನೆಯಡಿ ವಸತಿ ನೀಡಬೇಕು. ಲಿಡಕರ್‌ ನಿಗಮಕ್ಕೆ ₹ 500 ಕೋಟಿ ಮೀಸಲಿಡಬೇಕು. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯನ್ನು ರದ್ದುಪಡಿಸಬೇಕು. ಭಾರತದಿಂದ ವಿದೇಶಕ್ಕೆ ದನದ ಮಾಂಸ ರಫ್ತು ನಿಲ್ಲಿಸಬೇಕು' ಎಂದು ಒತ್ತಾಯಿಸಿದರು. 'ದಮನಿತರ ಪರವಾಗಿ ನಿರಂತರವಾಗಿ ಹೋರಾಡುತ್ತಲೇ ಅವರಲ್ಲಿ ಸ್ವಾಭಿಮಾನ ಮೂಡಿಸಿದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು' ಎಂದು ಆಗ್ರಹಿಸಿದರು. ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಕಲ್‌, ರತ್ನಮ್ಮ ಚಿಕ್ಕಬಳ್ಳಾಪುರ, ಮುಂಡರಗಿ ನಾಗರಾಜ್‌, ಕಮಲವ್ವ ಕರೆಮ್ಮನವರ್‌ ಪಾಲ್ಗೊಂಡಿದ್ದರು.

Category
ಕರಾವಳಿ ತರಂಗಿಣಿ