image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಮಾರೂಢ ಮಠದ ಸ್ವಾಮೀಜಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ನಾಲ್ವರು ಆರೋಪಿಗಳ ಬಂಧನ

ರಾಮಾರೂಢ ಮಠದ ಸ್ವಾಮೀಜಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ನಾಲ್ವರು ಆರೋಪಿಗಳ ಬಂಧನ

 ಬಾಗಲಕೋಟೆ: ಇಲ್ಲಿನ ರಾಮಾರೂಢ ಮಠದ ಪರಮ ರಾಮಾರೂಢ ಸ್ವಾಮೀಜಿಗೆ ಬೆದರಿಕೆ ಹಾಕಿ, ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಆರೋಪ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 80 ಲಕ್ಷಕ್ಕೂ ಅಧಿಕ ಹಣ, ಎರಡು ಕಾರು ಸೇರಿದಂತೆ ಇತರ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ವಿಭಾಗದ ಐಜಿಪಿ ವಿಕಾಸ್​ ಕುಮಾರ್ ತಿಳಿಸಿದ್ದಾರೆ.

ಬಾಗಲಕೋಟೆ ನಗರದ ಎಸ್​ಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ, "ಪರಮ ರಾಮಾರೂಢ ಸ್ವಾಮೀಜಿ‌ ಅವರು, ಸೆ.27ರಂದು ದೂರು ನೀಡಿದ ಹಿನ್ನೆಲೆಯಲ್ಲಿ, ಸಿಇಎನ್​​ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಎಸ್​ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಒಟ್ಟು ನಾಲ್ವರನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ಆರೋಪಿ 2023ಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ. ಈ ಹಿಂದೆ ಒಂದು ಶಾಲೆ ಕೂಡ ಆರಂಭಿಸಿದ್ದ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಪ್ರಸ್ತುತ ಆತ ನಿರುದ್ಯೋಗಿಯಾಗಿದ್ದಾನೆ. ಈತನ ಮೇಲಿನ ತನಿಖೆ ವೇಳೆ ಈಗಾಗಲೇ ಆರೋಪಿ ವಿರುದ್ಧ 12 ಕೇಸ್​ ದಾಖಲಾಗಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಈ ಆರೋಪಿಯು ಸ್ವಾಮೀಜಿಗೆ ಈ ಮೊದಲಿಂದ ಪರಿಚಯ ಮಾಡಿಕೊಂಡಿರುವುದು ತಿಳಿದು ಬಂದಿದೆ. ಸೆ. 12 ತಾರೀಖಿಗೆ ಅವರ ಬಳಿ ತೆರಳಿದ್ದ ಆರೋಪಿ ಅವರ ಆರೋಗ್ಯ ವಿಚಾರಿಸಿ, 1ರಿಂದ 2 ಗಂಟೆ ಮಠದಲ್ಲಿ ಸಮಯ ಕಳೆದು ಅವರಿಂದ ಮೊಬೈಲ್​ ನಂಬರ್​ ತೆಗದುಕೊಂಡು ಹೋಗಿರುತ್ತಾನೆ. ಆ ದಿನದಂದ ಆರೋಪಿ ತನ್ನ ಪ್ಲಾನ್​ ಅನ್ನು ಜಾರಿಗೆ ತರಲು ಆರಂಭಿಸಿದ್ದನ" ಎಂದು ವಿವರಿಸಿದರು.

"ಆರೋಪಿತರಿಂದ ಎರಡು ಕಾರು, 80 ಲಕ್ಷಕ್ಕೂ ಅಧಿಕ ನಗದು ಹಣ, ಮೂರು ಮೊಬೈಲ್​​, ಚೆಕ್​ ವಶಕ್ಕೆ ಪಡೆಯಲಾಗಿದೆ. ಪೊಲೀಸ್​ ಅಧಿಕಾರಿ ಎಂದು ಪೊಲೀಸ್​ ವಾಹನದ ಮಾದರಿಯಲ್ಲಿ ಸೈರನ್​, ಕರ್ನಾಟಕ ಸರ್ಕಾರ ಅಂತ ನಾಮಫಲಕ ಹಾಕಿಕೊಂಡು ಬಂದು ಬೆದರಿಸಿ ಮೋಸ ಮಾಡಿದ್ದಾರೆ. ವಂಚನೆ ಸೇರಿದಂತೆ ಇತರ ಆರೋಪದ ಅಡಿ, ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಸ್ವಾಮೀಜಿ ಅವರ ಏನು ಹಗರಣ ಇಲ್ಲದೆ ಕೋಟಿ ರೂಪಾಯಿಗಳು ಏಕೆ ನೀಡಿದರು ಎಂಬುದು ಸೇರಿದಂತೆ ಇತರ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ" ಎಂದು ಐಜಿಪಿ ವಿಕಾಸ್​ ಕುಮಾರ್​​​ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ