image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಟಿಡಿಆರ್ ಹಾಗೂ ಡಿಆರ್‌ಸಿ ನೀಡುವ ಜವಾಬ್ದಾರಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ'

ಟಿಡಿಆರ್ ಹಾಗೂ ಡಿಆರ್‌ಸಿ ನೀಡುವ ಜವಾಬ್ದಾರಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ'

ಬೆಂಗಳೂರು : ರಸ್ತೆ ಅಗಲೀಕರಣ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ಕೊಟ್ಟಿರುವ ಭೂಮಾಲೀಕರಿಗೆ 'ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು' (ಟಿಡಿಆರ್) ಹಾಗೂ ಅಭಿವೃದ್ಧಿಹಕ್ಕು ಪ್ರಮಾಣ ಪತ್ರ (ಡಿಆರ್‌ಸಿ) ನೀಡುವ ಜವಾಬ್ದಾರಿಯನ್ನು 'ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ' (ಜಿಬಿಎ) ವಹಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಟಿಡಿಆರ್ ನೀಡುವ ಜವಾಬ್ದಾರಿಯನ್ನು 2015ರ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ವಹಿಸಲಾಯಿತು. 2017-18ರಿಂದ 2024ರ ಡಿ.12ರವರೆಗೆ 140 ಪ್ರಕರಣಗಳಲ್ಲಿ ಟಿಡಿಆರ್ ವಿತರಿಸಿದೆ. ಅಲ್ಲದೆ, 134 ಭೂಮಾಲೀಕರು ಡಿಆರ್‌ಸಿ ಸದ್ಬಳಕೆಯನ್ನುಮಾಡಿಕೊಂಡಿದ್ದಾರೆ. ಇದೀಗ 2026ರಿಂದ ಟಿಡಿಆರ್ ಅಥವಾ ಡಿಆರ್‌ಸಿ ವಿತರಿಸುವ ಹೊಣೆಯನ್ನು ಮತ್ತೆ ಜಿಬಿಎಗೆ ಕೊಡಲಾಗಿದೆ.

ರಸ್ತೆ ಅಗಲೀಕರಣ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಭೂಮಿ ನೀಡುವ ಭೂಮಾಲೀಕರಿಗೆ ಸರ್ಕಾರ, ಸಾಮಾನ್ಯವಾಗಿ ನಗದು ರೂಪದಲ್ಲಿ ಪರಿಹಾರ ನೀಡುತ್ತದೆ. ಕೆಲ ಸಂದರ್ಭಗಳಲ್ಲಿ ಭೂಮಾಲೀಕರು ನಗದು ಪರಿಹಾರವನ್ನು ಸ್ವೀಕರಿಸಲು ಇಚ್ಛಿಸದಿದ್ದಲ್ಲಿ, ಅದರ ಬದಲಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು (ಟಿಡಿಆರ್) ನೀಡಲಾಗುತ್ತದೆ. ಕೆಲವೊಮ್ಮೆ ಇದನ್ನು ಅಭಿವೃದ್ಧಿಹಕ್ಕು ಪ್ರಮಾಣ ಪತ್ರದ(ಡಿಆರ್‌ಸಿ) ರೂಪದಲ್ಲಿ ವಿತರಿಸಲಾಗುತ್ತದೆ. ಸರ್ಕಾರವು ಡಿಆರ್‌ಸಿ ಹಸ್ತಾಂತರ ಮತ್ತು ಮಾರಾಟಕ್ಕೆ ಅನುಮತಿ ನೀಡಿರುವುದರಿಂದ, ಭೂಮಾಲೀಕರು ತಮ್ಮ ಟಿಡಿಆರ್ ಅಥವಾ ಡಿಆರ್‌ಸಿ ಅನ್ನು ಅಭಿವೃದ್ಧಿಕಾರರಿಗೆ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾದ ಹೆಚ್ಚುವರಿ ಆರ್ಥಿಕ ಲಾಭ ಪಡೆಯುವ ಅವಕಾಶ ಹೊಂದಿರುತ್ತಾರೆ. ಈ ವ್ಯವಸ್ಥೆ 2005ರಿಂದ ನಗರ ಪ್ರದೇಶಗಳಲ್ಲಿ ಜಾರಿಯಲ್ಲಿದ್ದು, ಸರ್ಕಾರಕ್ಕೆ ನೇರ ಹಣಕಾಸು ಭಾರವನ್ನು ಕಡಿಮೆ ಮಾಡುವುದರ ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಗೂ ಸಹಕಾರಿಯಾಗುತ್ತಿದೆ.

Category
ಕರಾವಳಿ ತರಂಗಿಣಿ