image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿಕಾರಿಪುರದಲ್ಲಿ ರಂಜಾನ್ ಹಬ್ಬದ ದೇಣಿಗೆ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ಶಿಕಾರಿಪುರದಲ್ಲಿ ರಂಜಾನ್ ಹಬ್ಬದ ದೇಣಿಗೆ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಂಜಾನ್ ಹಬ್ಬದ ದೇಣಿಗೆ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಪ್ರತಿ ಕುಟುಂಬಕ್ಕೆ ₹1000 ದೇಣಿಗೆ ನಿಗದಿಪಡಿಸಿದ್ದನ್ನು ವಿರೋಧಿಸಿದಾಗ ಈ ಘರ್ಷಣೆ ಉಂಟಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ರಂಜಾನ್ ಹಬ್ಬಕ್ಕಾಗಿ ದೇಣಿಗೆ ಸಂಗ್ರಹದ ವಿಚಾರವಾಗಿ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಗಗ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಸೀದಿ ನಿರ್ವಹಣೆ ಸ್ವಚ್ಛತೆ ಹಾಗೂ ದಾನ ನೀಡುವ ಕಿಟ್ ಗಳಿಗೆ ದೇಣಿಗೆ ನೀಡಲು ತಿಳಿಸಲಾಗಿತ್ತು. ರಂಜಾನ್ ಹಬ್ಬದ ಹಿನ್ನೆಲೆ ಪ್ರತಿ ಕುಟುಂಬ ಇಂತಿಷ್ಟು ದೇಣಿಗೆ ನೀಡಬೇಕು ಎಂದು ಮಸೀದಿಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನ ಒಂದು ಗುಂಪು ತೀವ್ರವಾಗಿ ವಿರೋಧಿಸಿತ್ತು. ಸಭೆಯ ತೀರ್ಮಾನವನ್ನು ಒಪ್ಪಿದ ಮತ್ತು ಒಪ್ಪದ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಮಾತಿನ ಚಕಮಕಿ ರಸ್ತೆಗೆ ಬಂದಿದ್ದು, ಎರಡೂ ಗುಂಪಿನ ಜನರು ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿದ್ದಾರೆ. ಕಲ್ಲು ತೂರಾಟ ಸಂಬಂಧ ಶಿಕಾರಿಪುರ ಪಟ್ಟಣದ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ರೂ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪರಸ್ಪರ ಕಲ್ಲು ತೂರಾಡಿಕೊಂಡಿದ್ದಾರೆ. ಮಸೀದಿಯಲ್ಲಿ ಪ್ರತಿ ಮನೆಗೆ 1 ಸಾವಿರ ರೂ. ದೇಣಿಗೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಈ ನಿರ್ಧಾರವನ್ನು ಖಂಡಿಸಿದ ಕೆಲವರು, ಪ್ರತಿ ಕುಟುಂಬದವರು 1,000 ನೀಡಲು ಸಾಧ್ಯವಿಲ್ಲ. ಇಲ್ಲಿ ಕೆಲವರು ಬಡವರಿದ್ದಾರೆ 500 ಪಡೆಯುವಂತೆ ಆಗ್ರಹಿಸಿದ್ದರು. ಇದೇ ವಿಷಯವಾಗಿ ಎರಡು ಗುಂಪುಗಳು ರಚನೆಯಾಗಿ ಜಗಳ ಆರಂಭವಾಗಿತ್ತು. ಪಟ್ಟಣದಲ್ಲಿಯ ಕಲ್ಲು ತೂರಾಟ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಶಿಕಾರಿಪುರ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕಲ್ಲು ತೂರಾಟ ಸಂಬಂಧ 10 ಜನರನ್ನು ಬಂಧಿಸಲಾಗಿದೆ. ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.

Category
ಕರಾವಳಿ ತರಂಗಿಣಿ