image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆಕಾಶವಾಣಿ ಭದ್ರಾವತಿಯ ಅಧಿಕಶಕ್ತಿ ಪ್ರಸಾರ 10 ಕಿಲೋವ್ಯಾಟ್ ಎಫ್.ಎಂ. 101.4 ಮೆಗಾಹರ್ಟ್ಸ್ ಶಿವಮೊಗ್ಗ ಕೇಂದ್ರದಲ್ಲಿ ಉದ್ಘಾಟನೆ

ಆಕಾಶವಾಣಿ ಭದ್ರಾವತಿಯ ಅಧಿಕಶಕ್ತಿ ಪ್ರಸಾರ 10 ಕಿಲೋವ್ಯಾಟ್ ಎಫ್.ಎಂ. 101.4 ಮೆಗಾಹರ್ಟ್ಸ್ ಶಿವಮೊಗ್ಗ ಕೇಂದ್ರದಲ್ಲಿ ಉದ್ಘಾಟನೆ

ಭದ್ರಾವತಿ : 1965 ರ ಫೆಬ್ರವರಿ 7ರಂದು ಆರಂಭವಾದ ಆಕಾಶವಾಣಿ ಭದ್ರಾವತಿ ಕೇಂದ್ರ ವಿವಿಧ ಅಂತಗಳಲ್ಲಿ ಪ್ರಸಾರ ಶಕ್ತಿಯನ್ನ ಅಧಿಕ ಮಾಡಿಕೊಳ್ಳುತ್ತ ಬಂದ್ದಿದು ೬೨ನೇ ವರ್ಷದಲ್ಲಿ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನವನ್ನ ಒಳಗೊಂಡ ೧೦ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ೧೦೧.೪ ತರಂಗಾoತರದ ಮೂಲಕ ಶಿವಮೊಗ್ಗದ ಸುತ್ತಮುತ್ತಲಿನ ಸುಮಾರು ೮ ಜಿಲ್ಲೆಗಳಿಗೆ ಪ್ರಸಾರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಆಕಾಶವಾಣಿ ಶಿವಮೊಗ್ಗ ಎಫ್.ಎಂ. ಕೇಂದ್ರದ ಮುಖಾಂತರ ಭದ್ರಾವತಿಯ ಆಕಾಶವಾಣಿಯ ಕಾರ್ಯಕ್ರಮಗಳು 

ಪ್ರಸಾರವಾಗಲಿದ್ದು ಜಿಲ್ಲೆಯ ವಿವಿಧ ಸಾಂಸ್ಕöÈತಿಕ, ಸಾಹಿತ್ಯಿಕ ಮತ್ತು ಜಾನಪದ ಕಲಾಕಾರರಿಗೆ ಹೆಚ್ಚಿನ ಅವಕಾಶ ಸಿಗಲಿದ್ದು ಮಹಿಳೆಯರು, ಮಕ್ಕಳು, ಯುವಕರು ಮತ್ತು ಎಲ್ಲಾ ವಯೋಮಾನದವರಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಮಾಹಿತಿ ಮನೋರಂಜನೆ ಹಾಗು ಶಿಕ್ಷಣವನ್ನ ಧ್ಯೇಯವಾಗಿಟ್ಟುಕೊಂಡ ಆಕಾಶವಾಣಿ ಭದ್ರಾವತಿ ಕೇಂದ್ರವು ಹೆಚ್ಚಿನ ಜನರಿಗೆ ತಲುಪಲು ಮಧ್ಯ ಕರ್ನಾಟಕದಲ್ಲಿ ಸ್ಥಾಪಿತವಾದ ಈ 

ಕೇಂದ್ರ ಅನುಕೂಲತೆ ಕಲ್ಪಿಸುತ್ತದೆ. ಈ ಕಾರ್ಯಕ್ರಮ ದಿನಾಂಕ 26.06.2026 ರಂದು ಮಧ್ಯಾಹ್ನ 12.30 ಕ್ಕೆ ಕೇಂದ್ರ ಸರ್ಕಾರದ ಮಾನ್ಯ ರಾಜ್ಯ ಮಾಹಿತಿ ಪ್ರಸಾರ ಹಾಗು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಡಾ.ಎಲ್.ಮುರುಗನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದರಾದ ಶ್ರೀ.ಬಿ.ವೈ.ರಾಘವೇಂದ್ರ ಹಾಗು ಜಿಲ್ಲಾ ಮಂತ್ರಿಗಳಾದ ಶ್ರೀ. ಎಸ್.ಮಧುಬಂಗಾರಪ್ಪ ಹಾಗು ಇವರೊಡನೆ ಶಿವಮೊಗ್ಗ ಜಿಲ್ಲೆಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಎಲ್ಲಾ ಸದಸ್ಯರುಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಹೃತ್ಪೂವಕವಾಗಿ ಆಮಂತ್ರಿಸುತ್ತಿದ್ದೇವೆ. ತಾವುಗಳು ಆಗಮಿಸಿ ಕಾರ್ಯಕ್ರಮ ವರದಿ ಮಾಡಲು ಈ ಮೂಲಕ ಕೋರುತ್ತಿದ್ದೇವೆ.

Category
ಕರಾವಳಿ ತರಂಗಿಣಿ