image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಒಂದೇ ಕೋಮಿನ ಅಲ್ಪಸಂಖ್ಯಾತರು ಅಪರಾಧ ಕೃತ್ಯ ನಡೆಸುತ್ತಿರುವುದು ಕಾಕತಾಳೀಯವೇ? : ಡಾ. ರವಿ ಸಿ.ಟಿ

ಒಂದೇ ಕೋಮಿನ ಅಲ್ಪಸಂಖ್ಯಾತರು ಅಪರಾಧ ಕೃತ್ಯ ನಡೆಸುತ್ತಿರುವುದು ಕಾಕತಾಳೀಯವೇ? : ಡಾ. ರವಿ ಸಿ.ಟಿ

ಬೆಂಗಳೂರು : ಗಣೇಶ ಮೆರವಣಿಗೆ ಕಲ್ಲು ತೂರಾಟ ಮಾಡಿದವರು ಅಪ್ರಾಪ್ತರು, ಚಿಕ್ಕಮಗಳೂರಿನಲ್ಲಿ ಮನೆಗೆ ಕಲ್ಲು ತೂರಿದವರು ಅಪ್ರಾಪ್ತರು, ಶಿವಮೊಗ್ಗದಲ್ಲಿ ಹತ್ಯೆ ನಡೆಸಿದವರು ಅಪ್ರಾಪ್ತರು. ಆದರೆ, ಅಪ್ರಾಪ್ತರಿಗೆ ಇಂತಹ ಮನಸ್ಥಿತಿ ಎಲ್ಲಿಂದ ಬಂತು? ಇಂತಹ ಕೆಲಸ ಮಾಡುವ ಅಪ್ರಾಪ್ತರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗುವುದು ಹೇಗೆ? ಇದು ಕಾಕತಾಳೀಯವೋ ಅಥವಾ ಯೋಜಿತ ಷಡ್ಯಂತ್ರವೋ ಎಂದು ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ರವಿ ಸಿ.ಟಿ ಹೇಳಿದರು. ಅವರು ಇಂದು ಬೆಂಗಳೂರಲ್ಲಿ ಮಾಧ್ಯಮಗಳೊಡನೆ ಮಾತನಾಡುತ್ತಿದ್ದರು. ಶಿವಮೊಗ್ಗದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಂಕೇತನನ್ನು ಕಾರಣವಿಲ್ಲದೆ ಹತ್ಯೆ ಮಾಡಿದ್ದಾರೆ. ಭಟ್ಕಳದ ಬೈಲೂರಿನಲ್ಲಿ ಅಪ್ರಾಪ್ತರು ಹಿಂದೂ ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ದೇಶದ ಉದ್ದಗಲಕ್ಕೂ ಕೋಮು ಗಲಭೆ, ಭಯೋತ್ಪಾದನೆ ಷಡ್ಯಂತ್ರದ ಹಿನ್ನೆಲೆಯಲ್ಲಿ ಬಹಳಷ್ಟು ಜನರ ಬಂಧನವಾಗಿದ್ದು, ಇದು ಆಕಸ್ಮಿಕ ಎಂಬAತೆ ಕಾಣುತ್ತಿಲ್ಲ. ಇದರ ಕುರಿತು ಸಮಗ್ರವಾಗಿ ತನಿಖೆ ಆಗಬೇಕು ಎಂದು ರವಿ ಆಗ್ರಹಿಸಿದರು.

ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಕೋಟಿ ಕೋಟಿ ಲೂಟಿ ಹೊಡೆಯುವವರಿಗೆ ಅವಕಾಶ ಮಾಡಿಕೊಡುವುದು ಸಾಮಾಜಿಕ ನ್ಯಾಯವೇ? ಯಾವಾಗ ಮುಖ್ಯಮಂತ್ರಿಗಳ ಕುರ್ಚಿಗೆ ಸಂಚಕಾರ ಬರುತ್ತದೆ, ಆಗೆಲ್ಲ ಸಾಮಾಜಿಕ ನ್ಯಾಯದ ಮಾತನಾಡುತ್ತೀರಿ. ಇಲ್ಲವಾದರೆ ಬರಿಯ ಸ್ವಜನ ಪಕ್ಷಪಾತ, ಸ್ವಾರ್ಥವಷ್ಟೇ ಮಾಡುತ್ತೀರಿ. ಇದು ಯಾವ ಸೀಮೆ ಸಾಮಾಜಿಕ ನ್ಯಾಯ? ಎಂದು ರವಿ ಪ್ರಶ್ನಿಸಿದರು. ಸಿದ್ದರಾಮಯ್ಯನವರು ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದವರು. ಹೀಗಿರುವಾಗ, ಹಿಂದುಳಿದ ಜಾತಿಯ ಕಾರ್ಡ್ ಏಕೆ ಬಳಸುತ್ತಿದ್ದಾರೆ? ಯಾವ ಜಾತಿಯವರಾದರೂ ಮುಖ್ಯಮಂತ್ರಿ ಆಗಬಹುದು. ಅದು ಪ್ರಜಾಪ್ರಭುತ್ವದ ಸೌಂದರ್ಯ. ಅತ್ಯಂತ ದೀರ್ಘಕಾಲ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದವರು. ಅವರು ಮುಖ್ಯಮಂತ್ರಿ ಆದ ನಂತರ, ಎಷ್ಟು ಜನ ಕುರಿ ಕಾಯುವವರನ್ನು ಸಾಮಾಜಿಕವಾಗಿ ಮೇಲಕ್ಕೆ ತಂದಿದ್ದಾರೆ? ಯಾರಿಗೆ ಆರ್ಥಿಕ ಶಕ್ತಿ ಕೊಟ್ಟಿದ್ದಾರೆ? ೨೦೧೩ರ ಚುನಾವಣೆಯಲ್ಲಿ ಡಾ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅವರ ಸೋಲಿಗೆ ಷಡ್ಯಂತ್ರ ಮಾಡಿದ್ದು ಯಾರು ಎಂದು ಕೇಳಿದರೆ, ಅವರು ತನ್ನ ನೋವಿನ ಕಥೆ ಹೇಳುತ್ತಾರೆ. ಎಂದು ರವಿ ಹೇಳಿದರು. ಆಡಳಿತ ನಡೆಸುವವರ ಮತ್ತು ಕೆಲವು ಪೊಲೀಸರ ಬೇಜವಾಬ್ದಾರಿಯಿಂದಾಗಿ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಹಾವಳಿ ಉಂಟಾಗಿದೆ. ಇದರಿಂದಾಗಿ ಯೋಜಿತ ಹಿಂಸೆ, ಕೊಲೆಗಳು ಹೆಚ್ಚಾಗಿರಬಹುದು. ದಾವಣಗೆರೆ, ಮೈಸೂರು, 

ಬೆಂಗಳೂರು ಎಲ್ಲೆಡೆ ಡ್ರಗ್ಸ್ ಪತ್ತೆ ಆಗುತ್ತದೆ. ಚಿಕ್ಕಮಗಳೂರು, ಶಿವಮೊಗ್ಗದಂತಹ ನಗರಗಳಲ್ಲಿ ಡ್ರಗ್ಸ್ ಇರಲಿಲ್ಲ. ಈಗ ಡ್ರಗ್ಸ್ ಇಲ್ಲದ ಜಾಗವೇ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ, ಇಡೀ ಸರ್ಕಾರಕ್ಕೆ ಇದಾವುದರ ಕಾಳಜಿಯೂ ಇಲ್ಲ. ಇವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮತ್ತು ಭ್ರಷ್ಟಾಚಾರ ನಡೆಸುವುದು ಮಾತ್ರ ಮುಖ್ಯ. ಈಗಾಗಲೇ ೧೫೦ಕ್ಕೂ ಹೆಚ್ಚು ಜನರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಇನ್ನು ಆಡಳಿತ ಪಕ್ಷದ ಎಲ್ಲ ಸದಸ್ಯರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದರೆ ಅವರೆಲ್ಲರಿಗೂ ಸಮಾಧಾನ ಆಗಬಹುದು. ಈಗಾಗಲೇ ೭.೫ ಲಕ್ಷ ಕೋಟಿ ರೂಪಾಯಿ ಸಾಲಕ್ಕೆ ಕರ್ನಾಟಕವನ್ನು ತಳ್ಳಲಾಗಿದೆ. ಇವರು ಮಜಾ ಮಾಡಿ, ರಾಜ್ಯವನ್ನು ಹಾಳು ಮಾಡಿ, ಅಧಿಕಾರ ತ್ಯಜಿಸಬಹುದು ಎಂದು ರವಿ ಟೀಕಿಸಿದರು. ಚಂದ್ರು ಲಮಾಣಿ ಬಂಧನದ ಕುರಿತಂತೆ ನಾವು ಕ್ಲೀನ್ ಚಿಟ್ ಕೊಡುವುದಿಲ್ಲ, ಸಮರ್ಥಿಸುವುದೂ ಇಲ್ಲ. ಆದರೆ, ಈ ಪ್ರಕರಣದಲ್ಲಿ ಆತುರ ಇರುವುದು ಎದ್ದು ಕಾಣುತ್ತಿದೆ. ಎಫ್‌ಎಸ್‌ಎಲ್‌ಗೂ ಮುನ್ನ ಎಫ್‌ಐಆರ್ ಮತ್ತು ತುರ್ತು ಬಂಧನ ಕಂಡುಬoದಿದೆ. ಇದರ ಸತ್ಯಾಸತ್ಯತೆ ಪರೀಕ್ಷೆಯಾಗಲಿ. ತಪ್ಪು ಮಾಡಿದ್ದರೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ರವಿ ಹೇಳಿದರು. ಗುತ್ತಿಗೆ ನೌಕರರಿಗೆ ಸಂಬಳ ಕೊಡುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಸರಬರಾಜಾಗದೆ, ಜೀವ ರಕ್ಷಕ ಔಷಧಗಳೇ ಲಭ್ಯವಿಲ್ಲ. ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ನಡೆಸುವ ಏಜೆನ್ಸಿಗೆ ಹತ್ತು ತಿಂಗಳಿoದ ಪಾವತಿಯಾಗಿಲ್ಲ. ರೋಗಿಗಳ ಕಷ್ಟ ನೋಡಲಾರದ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಹುದ್ದೆಗಳ ನೇಮಕಾತಿ, ಒಳ ನೇಮಕಾತಿ, ಇತ್ಯಾದಿಗಳ ಅನುಷ್ಠಾನ ಇಲ್ಲಿ ಸಾಧ್ಯವೇ ಇಲ್ಲ. ಈ ಸರ್ಕಾರದಿಂದ ಸೂಕ್ತ ಆಡಳಿತ ನಿರೀಕ್ಷಿಸುವುದೇ ಹಾಸ್ಯಾಸ್ಪದ ಎಂದು ರವಿ ಹೇಳಿದರು.

Category
ಕರಾವಳಿ ತರಂಗಿಣಿ