image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ : ಬಿ.ಕೆ ಹರಿಪ್ರಸಾದ್

ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ : ಬಿ.ಕೆ ಹರಿಪ್ರಸಾದ್

ಬೆಂಗಳೂರು : ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಒಂದೇ, ಬಿಜೆಪಿಯವರಿಂದ ಘನತೆ, ಗೌರವ ಸಂಸ್ಕೃತಿಯ ಬಿಟ್ಟಿ ಪಾಠ ಕೇಳುವುದು ಒಂದೇ. ಸದನಗಳ ಘನತೆ, ಗೌರವವನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚಿಂತಕರ ಚಾವಡಿಯಲ್ಲಿ ಬಾಯ್ತುರಿಕೆಗೆ ಮಾತಾಡುವ ನಾಯಕರನ್ನೇ ಆಯ್ಕೆ ಮಾಡುವ ಪರಂಪರೆ ಹೊಂದಿರುವ ಬಿಜೆಪಿ ಪಕ್ಷದವರು ಸದನದಲ್ಲಾಗಲಿ, ಸಾರ್ವಜನಿಕ ವೇದಿಕೆಯಲ್ಲಾಗಲಿ ಮಹಿಳೆಯರ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಉದುರಿಸುವ ಒಂದೊಂದು ಮುತ್ತುಗಳನ್ನು ನೋಡಿ ಜನ ಸಾಮಾನ್ಯರು ಹಾದಿ ಬೀದಿಯಲ್ಲಿ ಉಗಿಯುತ್ತಿರುವುದನ್ನು ಮರೆತಂತಿದೆ.

ಆರ್.ಎಸ್.ಎಸ್ ಹಾಗೂ ಬಿಜೆಪಿ ಇತ್ತೀಚಿಗೆ "ನಮಸ್ತೆ ಸದಾ ವತ್ಸಲೇ"ಯನ್ನು ಮರೆತು, "ನಮಸ್ತೆ ಸದಾ ರೌಡಿ ಕೋತ್ವಾಲನೇ"ಎಂದು ಶುರು ಮಾಡಿದ್ದಾರೆ. ಕೇಂದ್ರದ ಗೃಹ ಸಚಿವನೇ ಕೊಲೆಯ ಕೇಸ್ ಹಾಕಿಸಿಕೊಂಡು, ಗೂಂಡಾಗಿರಿ ಮಾಡಿ, ಸುಪ್ರೀಂ ಕೋರ್ಟಿನಿಂದ ಗಡಿಪಾರಾದವನ ಚೇಲಾಗಳೇ ತುಂಬಿ ತುಳುಕುತ್ತಿರುವ ಬಿಜೆಪಿಗೆ ರೌಡಿ ಕೋತ್ವಾಲನೇ ಗುರು. ರೌಡಿಗಳು, ರೇಪಿಸ್ಟ್ ಗಳು, ಕೊಲೆ ಗಡುಕರಿಗಾಗಿಯೇ ಬಿಜೆಪಿಯಲ್ಲಿ ಪ್ರತ್ಯೇಕ ಮೋರ್ಚಾ ಇರುವಾಗ ರೌಡಿ ಕೋತ್ವಾಲನ ಜಪ ಇಲ್ಲದೇ ನಿದ್ದೆ ಕೂಡ ಬರುವುದಿಲ್ಲ. ಸದನದಲ್ಲೇ ಸರ್ಕಾರದ ಸಚಿವೆಯನ್ನು "ವೇಶ್ಯೆ" ಎಂದು ಕರೆದವನನ್ನು ಚಿಂತಕರ ಚಾವಡಿಗೆ ಸದಸ್ಯ ಮಾಡಿರುವ ಬಿಜೆಪಿಯ ಸಂಸ್ಕೃತಿ ಯಾವುದು? ಮಹಿಳೆಯರನ್ನು ತುಚ್ಛವಾಗಿ ಮಾತಾಡುವ ನಾಯಕನನ್ನು ಬಿಜೆಪಿ ಪಕ್ಷ ಮುಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಇಲ್ಲ, ಹಿಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಎಂದು ಪ್ರಶ್ನಿಸಿದ್ದಾರೆ.

Category
ಕರಾವಳಿ ತರಂಗಿಣಿ