image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಂಗಳೂರು ದಸರಾಗೆ ವಿಶೇಷ ಆದ್ಯತೆಯ ಮೇರೆಗೆ 5 ಕೋಟಿ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಶಾಸಕ ಕಾಮತ್

ಮಂಗಳೂರು ದಸರಾಗೆ ವಿಶೇಷ ಆದ್ಯತೆಯ ಮೇರೆಗೆ 5 ಕೋಟಿ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಶಾಸಕ ಕಾಮತ್

ಮಂಗಳೂರು : ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಮಾನ್ಯ ಸಿ ಎಂ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಶಾಸಕ ವೇದವ್ಯಾಸ ಕಾಮತ್ಮ ಮನವಿ ಮಾಡಿದರು.

ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳು ನಾಡಿನ ಭಕ್ತರಿಂದ ತುಂಬಿರುತ್ತವೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ 5 ಕೋಟಿ ಘೋಷಣೆ ಮಾಡಿದರೆ ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಯೋಜನೆ ಮಾಡಬಹುದಾಗಿದ್ದು ಹಬ್ಬದ ಸಂಭ್ರಮವೂ ಹೆಚ್ಚಲಿದೆ. ಆದ್ದರಿಂದ ದಯವಿಟ್ಟು ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಗೊಳ್ಳಿ ಎಂದು ಮನವಿ ಮಾಡಿದರು.

ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ, ದಸರಾ ವೇಳೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಚಿಂತನೆ ನಡೆಸಿ ಅಂದಿನ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಸಹಕಾರದೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದರಿಂದಾಗಿ ದೇವಸ್ಥಾನಗಳಿಗೆ ದೀಪಾಲಂಕಾರಕ್ಕಾಗಿಯೇ ವರ್ಷಕ್ಕೆ ಸುಮಾರು 50 ರಿಂದ 60 ಲಕ್ಷದವರೆಗಿನ ಬಹುದೊಡ್ಡ ಆರ್ಥಿಕ ಹೊರೆಯಾಗುವುದು ತಪ್ಪಿರುವುದು ಈ ಸಂದರ್ಭದಲ್ಲಿ ಸ್ಮರಿಸಿದರು.

Category
ಕರಾವಳಿ ತರಂಗಿಣಿ