image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದ್ವೇಷ ಭಾಷಣ ಕಾಯ್ದೆಗೆ ಇನ್ನೂ ಬೀಳದ ರಾಜ್ಯಪಾಲರ ಅಂಕಿತ,: ಬಿಜೆಪಿಗರ ಮೇಲೆ ಕೇಸ್...!

ದ್ವೇಷ ಭಾಷಣ ಕಾಯ್ದೆಗೆ ಇನ್ನೂ ಬೀಳದ ರಾಜ್ಯಪಾಲರ ಅಂಕಿತ,: ಬಿಜೆಪಿಗರ ಮೇಲೆ ಕೇಸ್...!

ಬೆಂಗಳೂರು : 'ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025'  ಅಂಗೀಕಾರಗೊಂಡಿದ್ದು, ಇದಕ್ಕೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಆದರೂ ಸಹ ಗೃಹ ಇಲಾಖೆ ದ್ವೇಷ ಭಾಷಣದಡಿಯಲ್ಲಿ ಬಿಜೆಪಿ (BJP) ಮುಖಂಡರಿಗೆ ನೋಟಿಸ್ ನೀಡಿರುವು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಮೊದಲೇ ಬಿಜೆಪಿ ಮುಖಂಡ ವಿಕಾಸ ಪುತ್ತೂರ್ ಅವರಿಗೆ ದ್ವೇಷ ಭಾಷಣ ಕಾಯ್ದೆಯ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ವಿಕಾಸ ಪುತ್ತೂರ್ ದಿಕ್ಕೂಚಿ ಭಾಷಣಕಾರರಾಗಿದ್ದರು. ಹೀಗಾಗಿ ಚಿಕ್​ಕಮಗಳೂರು ಪೊಲೀಸ್, ವಿಕಾಸ ಪುತ್ತೂರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ದ್ವೇಷ ಭಾಷಣ ಮಸೂದೆ ಕಾನೂನಾಗಿ ಜಾರಿಗೆ ಬಂದಿಲ್ಲ. ಆಗಲೇ ಪೊಲೀರು ಬಿಜೆಪಿ ಮುಖಂಡನ ಮೇಲೆ ಕ್ರಮದ ಬಗ್ಗೆ ಎಚ್ಚರಿಕೆ ನೋಟಿಸ್ ನೀಡಿರುವುದು ಅಚ್ಚರಿ ಮೂಡಿಸಿದೆ.

Category
ಕರಾವಳಿ ತರಂಗಿಣಿ