image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಂದಿನಿಯ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನಂದಿನಿಯ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಗುಡ್‌ಲೈಫ್‌ ತುಪ್ಪ (ಹೈ ಅರೋಮ), ಪನೀರ್‌ (ಮೀಡಿಯಂ ಫ್ಯಾಟ್‌), ಹೆಚ್ಚು ಪ್ರೊಟೀನ್‌ ಯುಕ್ತ ಹಾಲು (ಎನ್‌-ಪ್ರೊಮಿಲ್ಕ್), ಪ್ರೋಬಯೋಟಿಕ್‌ ಮೊಸರು ಸೇರಿ ನಂದಿನಿಯ ಹೊಸ ಉತ್ಪನ್ನಗಳನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ವಿಧಾನಸೌಧದಲ್ಲಿ ನಡೆದ ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಡಾ। ಶಿವಸ್ವಾಮಿ, ಶಾಸಕರಾದ‌ ನಂಜೇಗೌಡ, ಅಶೋಕ್‌ ಕುಮಾರ್ ರೈ ಇದ್ದರು. ಎನ್‌-ಪ್ರೊಮಿಲ್ಕ್‌, ಪನೀರ್‌(ಮೀಡಿಯಂ ಫ್ಯಾಟ್‌), ಗುಡ್‌ಲೈಫ್‌ ಶುದ್ಧ ತುಪ್ಪ (ಹೈ ಅರೋಮಾ), ನಂದಿನಿ ಶುದ್ಧ ತುಪ್ಪ (ಕ್ಯೂಆರ್‌ ಕೋಡ್‌ನೊಂದಿಗೆ), ಪ್ರೊಬಯೋಟಿಕ್‌ ಮೊಸರು, ಪ್ರೊಬಯೋಟಿಕ್‌ ಮಾವಿನ ಲಸ್ಸಿ, ಪ್ರೊಬಯೋಟಿಕ್‌ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್‌, ನಂದಿನಿ ಹಸುವಿನ ಹಾಲು (₹10), ನಂದಿನಿ ಮೊಸರು (₹10) ಹೊಸದಾಗಿ ಬಿಡುಗಡೆಯಾಗಿರುವ ನಂದಿನಿ ಉತ್ಪನ್ನಗಳಾಗಿವೆ.

Category
ಕರಾವಳಿ ತರಂಗಿಣಿ