image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹುಬಳ್ಳಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಮಸೀದಿ ಕಾಮಗಾರಿ ಸ್ಥಗಿತ: ತೆರವು

ಹುಬಳ್ಳಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಮಸೀದಿ ಕಾಮಗಾರಿ ಸ್ಥಗಿತ: ತೆರವು

ಹುಬ್ಬಳ್ಳಿ: 'ಇಲ್ಲಿಯ ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ಮಸೀದಿ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಅರ್ಧ ಭಾಗದಷ್ಟು ತೆರವುಗೊಳಿಸಲಾಗಿದೆ. ಇನ್ನುಳಿದ ಭಾಗವನ್ನು ಒಂದು ವಾರದ ಒಳಗೆ ತೆರವು ಮಾಡಬೇಕು' ಎಂದು ನೇಕಾರನಗರ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗ್ರಹಿಸಿದರು. ಮಸೀದಿ ನಿರ್ಮಾಣದ ಕುರಿತು ಶುಕ್ರವಾರ ನೇಕಾರ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ ಅವರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಸಿದರು. ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಮಸೀದಿ ನಿರ್ಮಾಣ ಮಾಡುತ್ತಿದ್ದರೂ, ಪಾಲಿಕೆ ಹಾಗೂ ತಾಲ್ಲೂಕು ಆಡಳಿತ ತಮಗೇನೂ ಸಂಬಂಧವಿಲ್ಲ ಎನ್ನುವಂತೆ ಇಷ್ಟುದಿನ ಸುಮ್ಮನಿದ್ದಿದ್ದು ಅಕ್ಷಮ್ಯ ಎಂದು ಅಸಮಾಧಾನ ಹೊರಹಾಕಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌, 'ಶಿವನಾಗ ಬಡಾವಣೆಯ ಸುತ್ತಮುತ್ತ ಈಗಾಗಲೇ ನಾಲ್ಕು ಮಸೀದಿಗಳಿವೆ. ಹಿಂದೂಗಳಿಗೆ ಸಮಸ್ಯೆ ನೀಡಬೇಕು ಎನ್ನುವ ಉದ್ದೇಶದಿಂದಲೇ, ಕಾನೂನು ಬಾಹಿರವಾಗಿ ಮತ್ತೊಂದು ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದರು. ನಾಲ್ಕು ತಿಂಗಳಿನಿಂದ ಆಕ್ಷೇಪ ವ್ಯಕ್ತಪಡಿಸುತ್ತ, ತೆರವಿಗೆ ಒತ್ತಾಯಿಸುತ್ತಿದ್ದರೂ ಸ್ಪಂದಿಸಿರಲಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

'ಹತ್ತು ದಿನಗಳ ಹಿದೆ ಪ್ರತಿಭಟನೆ ನಡೆಸಿ, ಜ.1ರ ಒಳಗೆ ಕಾನೂನು ಬಾಹಿರವಾಗಿ ನಿರ್ಮಿಸಿದ್ದ ಮಸೀದಿ ತೆರವು ಮಾಡಬೇಕು, ಇಲ್ಲದಿದ್ದರೆ ನಾವೇ ತೆರವು ಮಾಡುತ್ತೇವೆ' ಎಂದು ಗಡುವು ವಿಧಿಸಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮೇಯರ್‌, ಉಪ ಮೇಯರ್‌ ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಎಂದು ತಿಳಿದು ಗೋಡೆ ತೆರವು ಮಾಡಿಸಿದ್ದಾರೆ. ಇನ್ನುಳಿದ ಭಾಗವನ್ನು ಒಂದು ವಾರದಲ್ಲಿ ತೆರವು ಮಾಡಬೇಕು' ಎಂದು ಆಗ್ರಹಿಸಿದರು. 'ಮನೆ ನಿರ್ಮಾಣ ಜಾಗದಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸುತ್ತಿರುವುದನ್ನು ಗಮನಿಸಿ ಪಾಲಿಕೆ ಅಂಟಿಸಿದ್ದ ನೋಟಸ್‌ ಹರಿದು ಹಾಕಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೋರಾಟದ ಕುರಿತು ಹಿಂದೂ ಕಾರ್ಯಕರ್ತರಿಗೆ ನೀಡಿದ್ದ ನೋಟಿಸ್‌ ತಕ್ಷಣ ಹಿಂಪಡೆಯಬೇಕು. ಇದು ಮೊದಲ ಹಂತದ ಹೋರಾಟವಾಗಿದ್ದು, ಕಾಲಮಿತಿಯಲ್ಲಿ ಬೇಡಿಕೆ ಈಡೇರದಿದ್ದರೆ ಎರಡನೇ ಹಂತದ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು. ಮಂಜುನಾಥ ಕಾಟ್ಕರ್‌, ಅಪ್ಪಣ್ಣ ದೀವಟಗಿ, ಶ್ರೀಧರ ಕಲಬುರ್ಗಿ, ಮಂಜು ತೇರದಾಳ, ಶಿವಯ್ಯ ಹಿರೇಮಠ, ಮಾಲತೇಶ ಉಮ್ಮನವರ, ಬಸು ದುರ್ಗದ, ಬಸು ಗೌಡರ, ನಾಗರಾಜ, ಯಶೋಧ ತಾಂಬೆ, ಪೂರ್ಣಿಮಾ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Category
ಕರಾವಳಿ ತರಂಗಿಣಿ