ಬೆಂಗಳೂರು: ಗಣೇಶ ಹಬ್ಬದ ವೇಳೆ ದೇವರ ಮುಂದೆ ಅರ್ಚಕರೊಬ್ಬರು ತುಳುನಾಡ ದೈವಾರಾಧನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿ ಮತ್ತಿಕೆರೆ ಯಲ್ಲಮ್ಮ ದೇವಸ್ಥಾನ ಅರ್ಚಕರಾದ ವೆಂಕಟೇಶ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜೈ ತುಳುನಾಡು ಸಂಘಟನೆಯು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಪಂಜುರ್ಲಿ ದೈವದ ನರ್ತನೆಯ ಕಟ್ಟುಪಾಡು ಅರಿಯದೇ ನೃತ್ಯ ಮಾಡುವಂತಿಲ್ಲ. ಹೀಗಾಗಿ ಗಣೇಶ ಚರ್ತುರ್ಥಿ ವೇಳೆ ಅರ್ಚಕ ವೆಂಕಟೇಶ್ ಅವರು ದೈವದ ವೇಷ ಧರಿಸಿ ಅಸಭ್ಯವಾಗಿ ನರ್ತಿಸಿದ್ದಾರೆ. ಈ ಮೂಲಕ ಕರಾವಳಿ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ' ದೂರಿನಲ್ಲಿ ಆರೋಪಿಸಲಾಗಿದೆ.