image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಭಾರತ್ ಮಾತಾ ಕೀ ಜೈ ಎಂದರೆ ಧ್ವೇಷ ಭಾಷಣ ಹೇಗಾಗುತ್ತದೆ: ವಕೀಲರಿಗೆ ಛೀಮಾರಿ ಹಾಕಿದ ಕರ್ನಾಟಕ ಹೈಕೋರ್ಟ್

ಭಾರತ್ ಮಾತಾ ಕೀ ಜೈ ಎಂದರೆ ಧ್ವೇಷ ಭಾಷಣ ಹೇಗಾಗುತ್ತದೆ: ವಕೀಲರಿಗೆ ಛೀಮಾರಿ ಹಾಕಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಹೇಳಿದ್ದಕ್ಕೆ ಧ್ವೇಷ ಭಾಷಣ ಎಂದು ಕೇಸ್ ಹಾಕ್ತೀರಾ? ಇದಕ್ಕೆ ಕೇಸ್ ಆದ್ರೂ ಹೇಗೆ ಹಾಕ್ತೀರಿ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ವಕೀಲರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ. ನ್ಯಾಯಾಧೀಶರು ವಕೀಲರನ್ನು ಧ್ವೇಷ ಭಾಷಣ ವಿರೋಧಿ ನಿಯಮದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಭಾರತ್ ಮಾತಾ ಕೀ ಜೈ ಎಂದರೆ ತಪ್ಪಾಗುತ್ತಾ? ಇದಕ್ಕೆ ಕಂಪ್ಲೇಂಟ್ ಆದ್ರೂ ಹೇಗೆ ರಿಜಿಸ್ಟರ್ ಮಾಡಿದ್ರಿ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ವಕೀಲರು ಅವರು ಭಾರತ್ ಮಾತಾ ಕೀ ಜೈ ಎಂದು ಹೇಳಲು ಹೇಳಿದ್ದಷ್ಟೇ ಅಲ್ಲ, ಒತ್ತಾಯ ಮಾಡಿದರು ಎಂದು ವಿವರಣೆ ಕೊಡಲು ಹೋಗುತ್ತಾರೆ. ಆಗ ತಡೆದ ನ್ಯಾಯಾಧೀಶರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರೆ ಅದು ಅಪರಾಧವೇ? ಎಂದು ವಿವರಣೆ ಸಮೇತ ತರಾಟೆಗೆ ತೆಗೆದುಕೊಂಡರು.

Category
ಕರಾವಳಿ ತರಂಗಿಣಿ