image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೀಸಲಾತಿ ಮತ್ತು ಹಿಂದೂ ಸಮಾಜದ ಕುರಿತು ಚರ್ಚೆ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ

ಮೀಸಲಾತಿ ಮತ್ತು ಹಿಂದೂ ಸಮಾಜದ ಕುರಿತು ಚರ್ಚೆ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜ್ಯೂನಿಯರ್, ಅವರಿಗೆ ನಾನು ಉತ್ತರ ಕೊಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಕ್ಕರ್ ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಾಯಲ್ಲಿ ಪಕ್ಷ ಸಿದ್ಧಾಂತದ ಮಾತು ಬರುತ್ತಿರುವುದು ಒಳ್ಳೆಯದು ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ವಿಜಯೇಂದ್ರ ಜ್ಯೂನಿಯರ್, ಅವರಿಗೆ ನಾನು ಉತ್ತರ ಕೊಡಲ್ಲ ಎಂದರು.

ಈಶ್ವರಪ್ಪ ಹಿಂದೂ ಸಮಾಜದ ಪ್ರಮುಖ ನಾಯಕ, ಅವರ ಬಗ್ಗೆ ಇವತ್ತೂ ಗೌರವವಿದೆ. ಅವರ ಮನೆಗೆ ಹೋಗಿದ್ದು ನಿಜ, ಯತ್ನಾಳ್ ಕರೆದರು ಅಂತಾ ಹೋಗಿದ್ದೆ, ಅಲ್ಲಿ ರಾಜೂಗೌಡ ಇರುವ ವಿಷಯ ಗೊತ್ತಿದ್ದರೆ ಈಶ್ವರಪ್ಪ ನಿವಾಸಕ್ಕೆ ನಾನು ಹೋಗ್ತಾನೇ ಇರಲಿಲ್ಲ. ರಾಜೂಗೌಡ ಯಡಿಯೂರಪ್ಪ ಶಿಷ್ಯರಾಗಿ ಗುರುತಿಸಿಕೊಂಡಿದ್ದಾರೆ, ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರಿರುವ ಮಾಹಿತಿ ಸಿಕ್ಕಿದ್ದರೆ ನಾನು ಮನೆಯ ಹೊರಗಡೆಯಿಂದಲೇ ವಾಪಸ್ ಬರುತ್ತಿದೆ. ಅಲ್ಲಿ ಮೀಸಲಾತಿ, ಹಿಂದೂ ಸಮಾಜದ ಕುರಿತು ಚರ್ಚೆ ಮಾಡಿದ್ದೇವೆ. ರಾಜಕೀಯ ವಿಚಾರದ ಬಗ್ಗೆ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪರನ್ನು ಪಕ್ಷದ ವರಿಷ್ಠರು ಉಚ್ಛಾಟಿಸಿದ್ದಾರೆ. ಅವರನ್ನು ಮರಳಿ ಕರೆತರುವ ಶಕ್ತಿ ನಮಗಿಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸಬೇಕು, ಅವರನ್ನು ಬಿಜೆಪಿಗೆ ಕರೆತರುವಲ್ಲಿ ನಮ್ಮ ಪಾತ್ರವೇನೂ ಇಲ್ಲ, ಪಕ್ಷವೇ ನಿರ್ಧರಿಸಬೇಕು ಎಂದರು.

ಸಿದ್ದರಾಮಯ್ಯ ವಿರುದ್ಧ ನಮ್ಮ ಪಕ್ಷದ ಹೋರಾಟಕ್ಕೆ ನಾವು ಬದ್ಧ. ಯಡಿಯೂರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದನ್ನು ಅವರು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯರನ್ನು ಮುಗಿಸಲು ಅವರ ಪಕ್ಷವೇ ಮುಂದಾಗಿದೆ, ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಈ ಹೋರಾಟದಲ್ಲಿ ನಮ್ಮ ಪಕ್ಷದ ಅಣತಿಯಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ