image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಂಬಾವಿಲಾಸ ಅರಮನೆಯ ದರ್ಬಾರ್​ ಹಾಲ್​​ನಲ್ಲಿ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ಅಂಬಾವಿಲಾಸ ಅರಮನೆಯ ದರ್ಬಾರ್​ ಹಾಲ್​​ನಲ್ಲಿ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ಮೈಸೂರು : ವರ್ಷದಲ್ಲಿ ಶರನ್ನವರಾತ್ರಿಯ ದಿನಗಳಲ್ಲಿ ಮಾತ್ರ ಪೂಜಿಸಲ್ಪಡುವ ರತ್ನ ಖಚಿತ ಸಿಂಹಾಸನವನ್ನ ಅಂಬಾವಿಲಾಸ ಅರಮನೆಯ ದರ್ಬಾರ್‌ ಹಾಲ್​ನಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಗಳ ನಂತರ ಶುಭ ಲಗ್ನದಲ್ಲಿ ನುರಿತ ಸಿಬ್ಬಂದಿಯಿಂದ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.

ಇಂದಿಗೂ ದೇಶದಲ್ಲಿ ರಾಜ ಪರಂಪರೆಯಲ್ಲಿ ಶರನ್ನವರಾತ್ರಿ ಪೂಜೆ ನಡೆಯುವುದು ಮೈಸೂರಿನ ರಾಜವಂಶಸ್ಥರಲ್ಲಿ ಮಾತ್ರ. ಇದಕ್ಕೆ ಪೂರಕವೆಂಬಂತೆ ಸರ್ಕಾರ ಅರಮನೆಯ ಹೊರಗೆ ನಾಡಹಬ್ಬ ದಸರಾ ನಡೆಸಿದರೆ, ಅರಮನೆಯ ಒಳಗೆ ಸಂಪ್ರದಾಯದ ರೀತಿ ರಾಜವಂಶಸ್ಥರು ಶರನ್ನವರಾತ್ರಿಯನ್ನ 10 ದಿನಗಳ ಕಾಲ ಸಾಂಪ್ರದಾಯಕವಾಗಿ ನಡೆಸಿಕೊಂಡು ಬರುತ್ತಾರೆ.

ಅರಮನೆಯ ನೆಲ ಮಳಿಗೆಯ ಭದ್ರತಾ ಕೊಠಡಿಯಲ್ಲಿ ಬಿಡಿ ಭಾಗಗಳಲ್ಲಿ ಸಿಂಹಾಸನವನ್ನು ಭದ್ರವಾಗಿ ಇಡಲಾಗುತ್ತದೆ. ಇಂದು ಅರಮನೆಯ ಆಡಳಿತ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುವ ಒಂದೊಂದು ಕೀಗಳನ್ನ ತರಿಸಿ ಇಬ್ಬರ ಸಮ್ಮುಖದಲ್ಲಿ ಸಿಂಹಾಸನದ ಭದ್ರತಾ ಕೊಠಡಿಯ ಬೀಗ ತೆಗೆದು ಸಿಂಹಾಸನದ ಮೂರು ಭಾಗಗಳಾದ ಆಸನ, ಮೆಟ್ಟಿಲು, ಬಂಗಾರದ ಛತ್ರಿ ಸೇರಿದಂತೆ 13 ವಿಭಾಗಗಳಲ್ಲಿ ಇರುವ ಸಿಂಹಾಸನದ ಬಿಡಿ ಭಾಗಗಳನ್ನ ದರ್ಬಾರ್‌ ಹಾಲ್​ಗೆ ತಂದು ನುರಿತ ಸಿಬ್ಬಂದಿಯಿಂದ ರಾಜಮಾತಾ ಪ್ರಮೋದಾ ದೇವಿ ಒಡೆಯರ್‌ ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳ ನೇತೃತ್ವದಲ್ಲಿ ಜೋಡಣೆ ನಡೆಯಲಿದೆ.

ಸಿಂಹಾಸನ ಜೋಡಣೆಗೆ ಅಂದಾಜು ಒಂದು ಗಂಟೆಯಿಂದ ಒಂದು ಗಂಟೆ ಮೂವತ್ತು ನಿಮಿಷ ಅಂದರೆ (90 minutes ) ತೊಂಬತ್ತು ನಿಮಿಷಗಳು ಬೇಕಾಗುತ್ತದೆ. ಆ ನಂತರ ಸಿಂಹಾಸನದ ಭದ್ರತೆಗೆ ಅಂಜೂರ ಮರದಿಂದ ತಯಾರಿಸಿರುವ ರಾಜ ಗದ್ದಿಗೆಗೆ ಆನೆ ದಂತದ ಹತ್ತಿಯನ್ನ ಅಳವಡಿಸಲಾಗಿದ್ದು, ಅದು ಮುಖ್ಯ ಆಸನದ ಬಳಿ ಇರುತ್ತದೆ. ಈ ಸಿಂಹಾಸನಕ್ಕೆ ಸಿಂಹವನ್ನು ನವರಾತ್ರಿಯ ಮೊದಲ ದಿನ ಖಾಸಗಿ ದರ್ಬಾರ್​ಗಿಂತ ಮುಂಚಿತವಾಗಿ ಜೋಡಣೆ ಮಾಡಲಾಗುತ್ತದೆ . ಈಗ ಆಸನವಾಗಿರುವ ಸಿಂಹಾಸನ ಅಂದು ಸಿಂಹಾಸನ ಆಗುತ್ತದೆ.

Category
ಕರಾವಳಿ ತರಂಗಿಣಿ