image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಳಗಾವಿಯಲ್ಲಿ ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಹಸ್ರಾರು ಯುವಕರು

ಬೆಳಗಾವಿಯಲ್ಲಿ ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಹಸ್ರಾರು ಯುವಕರು

ಬೆಳಗಾವಿ : ದೇಶಸೇವೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸಹಸ್ರಾರು ಯುವಕರ ದಂಡು ಬೆಳಗಾವಿಯಲ್ಲಿ ಜಮಾವಣೆಗೊಂಡಿದ್ದು, ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಾವಿಯ ಟೆರಿಟೋರಿಯಲ್ ಆರ್ಮಿ ನೇತೃತ್ವದಲ್ಲಿ ಈ ಬೃಹತ್ ಸೇನಾ ಭರ್ತಿ ರ್ಯಾಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಮಧ್ಯರಾತ್ರಿ 2 ಗಂಟೆಯಿಂದಲೇ ಯುವಕರು ರ್ಯಾಲಿಗೆ ಸಜ್ಜಾಗಿದ್ದು, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸಿಲ್ಲ. ಬಹುತೇಕರು ಬೀದಿ ಬಳಿಯ ಪುಟ್ ಪಾತ್ ಮೇಲೆಯೇ ಹಾಗೂ ಸಿಪಿಎಡ್ ಮೈದಾನವನ್ನೇ ತಮ್ಮ ತಾತ್ಕಾಲಿಕ ಹಾಸಿಗೆ ಮಾಡಿಕೊಂಡು ರಾತ್ರಿ ಕಳೆದಿದ್ದಾರೆ. ದೈಹಿಕ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ ಮತ್ತು ಬೆಳಗಾವಿ ಸೇರಿ ಒಟ್ಟು ಏಳು ಜಿಲ್ಲೆಗಳ ಸೇನಾ ಆಕಾಂಕ್ಷಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

Category
ಕರಾವಳಿ ತರಂಗಿಣಿ