ದಾನಮ್ಮ ದೇವಿ ಸನ್ನಿಧಾನದಲ್ಲಿ ಭಕ್ತಿಯಿಂದನಡೆದ ಹುಡಿ ತುಂಬುವ ಕಾರ್ಯಕ್ರಮ
ದಾನಮ್ಮ ದೇವಿ ಸನ್ನಿಧಾನದಲ್ಲಿ ಭಕ್ತಿಯಿಂದನಡೆದ ಹುಡಿ ತುಂಬುವ ಕಾರ್ಯಕ್ರಮ
20/11/2025
20/11/2025
ಶಿವಮೊಗ್ಗ :- ನಗರದ ಶ್ರೀ ಗುಡ್ಡಾಪುರ ದಾನಮ್ಮದೇವಿ ಟ್ರಸ್ಟ್ ವತಿಯಿಂದ ನಗರದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ತಾವರೆಕೆರೆ ಶೀಲ ಮಠ ಶ್ರೀ ಸಿದ್ಧಲಿಂಗ ಶಿವಚಾರ್ಯ ಶ್ರೀಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುತ್ತೈದೆಯರಿಗೆ ಹುಡಿ ತುಂಬಿ ಸುವ ಕಾರ್ಯಕ್ರಮ ನಡೆಯಿತು. ಬಿಜಾಪುರ ಜಿಲ್ಲೆಯ ಶ್ರೀ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಲ್ಲಿ ಚಟ್ಟಿ ಅಮವಾಸ್ಯೆ ದಿನದಲ್ಲಿ 6ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಹುಡಿ ತುಂಬುವ ಕಾರ್ಯ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಬಸವೇ ಶ್ವರ ಸಮಾಜ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಟ್ರಸ್ಟ್ ಪದಾಧಿಕಾರಿಗಳಾದ ತೀರ್ಥಪ್ಪ ಬಸವ ರಾಜಪ್ಪ, ನಿಂಬೇಹಣ್ಣು ಸುರೇಶ್, ರವಿ ಟ್ರೇಡರ್‍ಸ್ ಉಮೇಶ್, ಕಾರ್ತಿಕ್, ಕೆ.ಸಿ. ರುದ್ರೇಶ್, ಓಂ ಕಂಪ್ಯೂಟರ್ ಶ್ರೀನಾಥ್, ಕಲ್ಯಾಣ ಮಂದಿರದ ವ್ಯವಸ್ಥಾಪಕ ಪರಮೇಶ್ವ ರಯ್ಯ ಮತ್ತು ಸಮಾಜದ ಮಹಿಳೆಯರು ಭಾಗವಹಿಸಿದ್ದರು.