ಬೆಂಗಳೂರು: ಈಗಂತು ಭೂಮಿ ತೆಗೆದುಕೊಳ್ಳಬೇಕು ಎಂಬ ಹಂಬಲ ಎಲ್ಲರಲ್ಲೂ ಇದೆ. ಆದ್ರೆ ಇತ್ತೀಚಿನ ದಿನದಲ್ಲಿ ಚಿನ್ನದ ಬೆಲೆ ಏರಿಕೆಯಾದಷ್ಟೇ ಫಾಸ್ಟ್ ಆಗಿ ಭೂಮಿಯ ಬೆಲೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಸಾಮಾನ್ಯ ಜನ ಇದನ್ನ ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಆದರೆ ಕರ್ನಾಟಕ ಗೃಹ ಮಂಡಳಿಯಿಂದ ಈಗ ಸೈಟುಗಳ ಹರಾಜು ಪ್ರಕ್ರಿಯೆ ಶುರು ಮಾಡಿದ್ದಾರೆ. ಹರಾಜಿನ ಮೂಲಕವೇ ಸೈಟುಗಳನ್ನ ತೆಗೆದುಕೊಳ್ಳಬಹುದು. ಈಗಾಗಲೇ ಶುರುವಾಗಿದ್ದು, ಇನ್ನು ಬಹಳಷ್ಟು ಸಮಯವಿರುವ ಕಾರಣ ನೀವೂ ತೆಗೆದುಕೊಳ್ಳಬಹುದು. ಹಾಗಾದ್ರೆ ಅದೇಗೆ ಎಂಬುದರ ಡಿಟೈಲ್ ಇಲ್ಲಿದೆ ನೋಡಿ.
ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳ ಇ ಹರಾಜು ಮೂಲಕ ಸೈಟುಗಳ ಮಾರಾಟ ಮಾಡುತ್ತಿವೆ. ಮನೆ, ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ವಾಸಯೋಗ್ಯ ಮತ್ತು ವಾಣಿಜ್ಯ ಸೈಟುಗಳನ್ನು ಕೂಎ ಹರಾಜು ಮಾಡಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಇ ಹರಾಜು ನೋಂದಣಿ ಆರಂಭವಾಗಿದೆ. ಆದರೆ ಇಂದಿನಿಂದ ನವೆಂಬರ್ 29ರ ಮಧ್ಯಾಹ್ನ 12 ಗಂಟೆಯವರೆಗೆ ನೋಂದಣಿಗೆ ಅವಕಾಶ ಇದೆ. ಈ ಹರಾಜಿನಲ್ಲಿ ಭಾಗವಹಿಸಿ ನೀವೂ ಕೂಡ ಸೈಟ್ ಗಳನ್ನ ತೆಗೆದುಕೊಳ್ಳಬಹುದು. https://kppp.karnataka.gov.in ವೆಬ್ಸೈಟ್ ಗೆ ಲಾಗಿನ್ ಆಗುವ ಮೂಲಕ ನೀವೂ ಸೈಟ್ ಗಳನ್ನ ತೆಗೆದುಕೊಳ್ಳಬಹುದು. ಬೆಂಗಳೂರಿನ ಸೂರ್ಯ ನಗರ, ತುಮಕೂರಿನ ಗೂಳೂರು ಬಡಾವಣೆ, ಪಾವಗಡ ಬಡಾವಣೆಯಲ್ಲಿ ಮೂಲೆನಿವೇಶನ, ಮಂಗಳೂರಿನ ಅಮ್ಟಾಡಿ ಬಟ್ವಾ, ಕೊಪ್ಪಳದ ಡಿಸಿ ಆಫೀಸ್ ಹಿಂಭಾಗ, ಕಲ್ಬುರ್ಗಿಯ ಕಾಳಗನೂರು ಕುಸನೂರು ಬಡಾವಣೆ, ಧಾರವಾಡದ ಕುಂದವಾಡ, ದಾವಣಗೆರೆಯ ಹರಿಹರ – ಅಮರಾವತಿ, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆ ಬಡಾವಣೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಯರದಕಟ್ಟೆ ಬಡಾವಣೆ ಮೂಲೆ ನಿವೇಶನಗಳು, ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಬಡಾವಣೆಯ ಮೂಲೆ ನಿವೇಶನ ಹಲವು ಕಡೆ ಹರಾಜು ಪ್ರಕ್ರಿಯೆ ಶುರುವಾಗಿದೆ.