image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಖರ್ಗೆ ಸ್ವಕ್ಷೇತ್ರ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ

ಖರ್ಗೆ ಸ್ವಕ್ಷೇತ್ರ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾದ ಗುರುಮಠಕಲ್‌ ಪಟ್ಟಣದಲ್ಲಿ ಶುಕ್ರವಾರ (ಆ. 31) ಪಥಸಂಚಲನ ನಡೆಸಲು ಯಾದಗಿರಿ ಜಿಲ್ಲಾಡಳಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (RSS) ಷರತ್ತುಬದ್ಧ ಅನುಮತಿ ನೀಡಿದೆ. ಸದ್ಯ ರಾಜ್ಯಸಭಾ ಸದಸ್ಯರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ಎಂಟು ಬಾರಿ ಗುರುಮಠಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಈ ಪಥಸಂಚಲನಕ್ಕೆ ಮಾರ್ಗ ಮತ್ತು ಭದ್ರತಾ ವ್ಯವಸ್ಥೆಗಳ ವಿವರವಾದ ಪರಿಶೀಲನೆಯ ನಂತರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸರ್ಕಾರಿ ಆದೇಶದ ಮೂಲಕ ಅನುಮತಿ ನೀಡಿದ್ದಾರೆ. ಆರ್‌ಎಸ್‌ಎಸ್‌ನ ಜಿಲ್ಲಾ ಪ್ರಚಾರ್ ಪ್ರಮುಖ್ ಬಸ್ಸಪ್ಪ ಸಂಜನೋಳ್ ಅವರು ಅಕ್ಟೋಬರ್ 23 ರಂದು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ಈ ಆದೇಶ ಹೊರಡಿಸಲಾಗಿದೆ. ಮೆರವಣಿಗೆಯು ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಹನುಮಾನ್ ದೇವಸ್ಥಾನ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ್ ಚೌಕ್ ಮತ್ತು ಸಿಹಿನೀರು ಬಾವಿ ಮಾರುಕಟ್ಟೆ ಮುಖ್ಯ ರಸ್ತೆಯ ಮೂಲಕ ಹಾದುಹೋಗಿ ನಂತರ ರಾಮ್ ನಗರದಲ್ಲಿ ಕೊನೆಗೊಳ್ಳಲು ಪೊಲೀಸರು ಅವಕಾಶ ನೀಡಿದ್ದಾರೆ. 

10 ಷರತ್ತುಗಳನ್ನು ವಿಧಿಸಿದ ಜಿಲ್ಲಾಡಳಿತ, ಷರತ್ತುಗಳಲ್ಲಿ ಯಾವುದಾದರೂ ಉಲ್ಲಂಘನೆಯಾದರೆ, ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತವು ಸ್ಪಷ್ಟಪಡಿಸಿದೆ. ಈ ಮೊದಲು ಅನುಮತಿ ಸಿಗದ ಕಾರಣ ಅಕ್ಟೋಬರ್ 25ರಂದು ಪಥಸಂಚಲನವನ್ನು ಮುಂದೂಡಲಾಗಿತ್ತು. ಆಯೋಜಕರು ಅ. 23ರಂದು ಜಿಲ್ಲಾಧಿಕಾರಿಗೆ ಮತ್ತೆ ಮನವಿ ಸಲ್ಲಿಸಿದ್ದರು. ಡಿಎಸ್‌ಪಿ ವರದಿ ಆಧರಿಸಿ ಇದೀಗ ಜಿಲ್ಲಾಧಿಸಾರಿ ಷರತ್ತುಬದ್ಧ ಅನುಮತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ