ಬಿದರ್ : ಬಸವಕಲ್ಯಾಣದಲ್ಲಿ ಟಿಪ್ಪು ಚೌಕ್ ನಿರ್ಮಾಣ ಮಾಡಿರುವ ಬಗ್ಗೆ ಮುಸ್ಲಿಂ ಮುಖಂಡರು ಸಂಭ್ರಮಾಚರಣೆ ನಡೆಸುತ್ತಿದ್ದು, ಇದರ ಬೆನ್ನಲ್ಲೆ ಟಿಪ್ಪು ಚೌಕ್ ತೆರವು ಮಾಡುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ನಗರಸಭೆಯಲ್ಲಿ ಠರಾವು ಪಾಸ್ ಮಾಡಿ, ಬಸವಕಲ್ಯಾಣದ ಬಂಗ್ಲಾ ಬಳಿ ಟಿಪ್ಪು ಚೌಕ್ ನಿರ್ಮಾಣ ಮಾಡಲಾಗಿದ್ದು, ಇದನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟಿಪ್ಪು ಚೌಕ್ ತೆರವು ಮಾಡದೇ ಇದ್ದರೆ ಬಸವಕಲ್ಯಾಣದ ಸಮಸ್ತ ಹಿಂದೂ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವುದಾಗಿ ಹಾಗೂ ನಗರಸಭೆಗೆ ಮುತ್ತಿಗೆ ಎಚ್ಚರಿಕೆ ನೀಡಲಾಗಿದೆ. ಶರಣರ ನಾಡಲ್ಲಿ ಹಿಂದೂ ಧರ್ಮೀಯರನ್ನ ಹತ್ಯೆ ಮಾಡಿದ ಮತಾಂಧನ ವೃತ್ತ ನಿರ್ಮಿಸಬೇಡಿ. ಯಾವುದೇ ಕಾರಣಕ್ಕೂ ಬಸವಕಲ್ಯಾಣದಲ್ಲಿ ಟಿಪ್ಪು ಚೌಕ್ ನಿರ್ಮಾಣ ಆಗಬಾರದು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಟಿಪ್ಪು ಚೌಕ್ ನಾಮಕರಣ ವಿಚಾರಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಗಲಾಟೆಯಾಗಿತ್ತು. ಗಲಾಟೆ ನಡುವೆಯೂ ಠರಾವು ಪಾಸ್ ಮಾಡಿ ನಾಮಕರಣ ಮಾಡುವುದಾಗಿ ಹೇಳಿದೆ. ವೃತ್ತ ನಿರ್ಮಾಣ ಹಿನ್ನಲೆ ಮುಸ್ಲಿಂ ಮುಖಂಡರು ಬಂಗ್ಲಾ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದು, ಇತ್ತ ಮುಸ್ಲಿಂ ಮುಖಂಡರ ಸಂಭ್ರಮಾಚರಣೆ ಆಗ್ತಿದಂತೆ, ಹಿಂದೂ ಸಂಘಟನೆ ಕಾರ್ಯಕರ್ತರಲ್ಲಿ ಅಸಮಾಧಾನ ಹೊರಹಾಕಿದ್ದಾರೆ.