image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗಂಟೆಯಲ್ಲಿ ಮಠದಿಂದ ಹೊರಡಬೇಕು ಎಂದು ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲಾಧಿಕಾರಿ ಆದೇಶ

ಗಂಟೆಯಲ್ಲಿ ಮಠದಿಂದ ಹೊರಡಬೇಕು ಎಂದು ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲಾಧಿಕಾರಿ ಆದೇಶ

ಬಾಗಲಕೋಟೆ: 'ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ರಕ್ಷಣೆಗಾಗಿ ಒಂದು ಗಂಟೆಯಲ್ಲಿ ಮಠದಿಂದ ಹೊರಡಬೇಕು' ಎಂದು ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲಾಧಿಕಾರಿ ಆದೇಶ ಜಾರಿಗೊಳಿಸಿದ್ದಾರೆ. ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲಿ ಶುಕ್ರವಾರ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿಯಲ್ಲಿ ಇರುವ ಕನೇರಿ ಶಾಖಾ ಮಠದಲ್ಲಿ ಸ್ವಾಮೀಜಿ ಉಳಿದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಸಂಗಪ್ಪ, ಡಿವೈಎಸ್‌ಪಿ ಗಜಾನನ ಸುತಾರ, ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಈ ಕುರಿತು ಸೂಚನೆ ನೀಡಿದರು. ನೋಟಿಸ್ ಪಡೆದ ಸ್ವಾಮಿಜಿ, 'ಯಾವುದೇ ಕಾರಣಕ್ಕೂ ತೆರಳುವುದಿಲ್ಲ. ಬಂಧಿಸುವಂತಿದ್ದರೆ, ಬಂಧಿಸಿ. ಸಮಾಧಾನ ಆಗುವವರೆಗೆ ಜೈಲಿನಲ್ಲಿಡಿ. ಪರಿಣಾಮಕ್ಕೆ ನೀವೇ ಜವಾಬ್ದಾರರು' ಎಂದರು.

Category
ಕರಾವಳಿ ತರಂಗಿಣಿ