image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ತವರು ಕ್ಷೇತ್ರದಲ್ಲೇ ಪ್ರಿಯಾಂಕ್‌ ಖರ್ಗೆಗೆ ಸೆಡ್ಡು ಹೊಡೆಯಲಿದೆ ಸಂಘಪರಿವಾರ!

ತವರು ಕ್ಷೇತ್ರದಲ್ಲೇ ಪ್ರಿಯಾಂಕ್‌ ಖರ್ಗೆಗೆ ಸೆಡ್ಡು ಹೊಡೆಯಲಿದೆ ಸಂಘಪರಿವಾರ!

ಕಲಬುರಗಿ : ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಸರ್ಕಾರಿ ಜಾಗಗಳಲ್ಲಿ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇದೇ 19ರಂದು ಬೃಹತ್‌ ಪಥಸಂಚಲ ನಡೆಸಲಿದೆ. ವಿಶೇಷವೆಂದರೆ ಸರ್ಕಾರದ ಅನುಮತಿಯನ್ನು ಪಡೆಯಬೇಕೆಂಬ ಪೂರ್ವ ಷರತ್ತನ್ನು ಪಡೆಯದೆ 19ರಂದು ಚಿತ್ತಾರಪುರದಲ್ಲಿ ಸಾವಿರಾರು ಸ್ವಯಂಸೇವಕರು ನಗರದ ಪ್ರಮುಖ ಪಟ್ಟಣಗಳಲ್ಲಿ ಪಥಸಂಚಲನ ನಡೆಸಲಿದ್ದಾರೆ. ಈ ಮೂಲಕ ತವರು ಕ್ಷೇತ್ರದಲ್ಲೇ ಪ್ರಿಯಾಂಕ್‌ ಖರ್ಗೆ ಸಂಘಪರಿವಾರ ಸೆಡ್ಡು ಹೊಡೆಯಲಿದೆ. ಪಥಸಂಚಲನಕ್ಕೆ ಅಗತ್ಯವಿರುವ ಪೂರ್ವಸಿದ್ದತೆಗಳನ್ನು ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದ್ದು, ಅಂದಿನ ಪಥಸಂಚಲನಕ್ಕೆ ಸ್ವಯಂಪ್ರೇರಿತರಾಗಿ ಸಾವಿರಾರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಯಾವುದೇ ಸಂಘಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಅನುಮತಿ ಅಗತ್ಯ ಎಂಬ ತೀರ್ಮಾನದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಪಥಸಂಚನ ಇದಾಗಿದೆ. ಇದೊಂದು ಶಕ್ತಿ ಪ್ರದರ್ಶನವೆಂದೇ ಬಿಂಬಿತವಾಗಿದ್ದು, ಚಿತ್ತಾಪುರದ ಪ್ರಮುಖ ಪಟ್ಟಣಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪಥಸಂಚಲನವನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ, ನಾವು ಯಾವುದೇ ಅನುಮತಿಯನ್ನು ಪಡೆಯದೇ ಪಥಸಂಚಲನ ನಡೆಸುತ್ತೇವೆ. ಸ್ಥಳೀಯ ಸಂಸ್ಥೆಗಳಿಂದಲೂ ಒಪ್ಪಿಗೆ ಪಡೆಯುವುದಿಲ್ಲ, ಹಿಂದೆಯೂ ಪಡೆಯುವುದಿಲ್ಲ ಮುಂದೆಯೂ ಪಡೆಯುವುದಿಲ್ಲ. ನೋಡೇ ಬಿಡೋಣ ಏನಾಗುತ್ತದೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಬಾಂಡಗೆ ಅವರ ಮಾತಿಗೆ ದನಿಗೂಡಿಸಿರುವ ಬಿಜೆಪಿಯ ಅನೇಕ ನಾಯಕರು, ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ದೇಶಭಕ್ತ ಸಂಘಟನೆಯಾದ ಆರ್‌ಎಸ್‌‍ಎಸ್‌‍ಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ. ನೀವು ಬೆದರಿಕೆ ಹಾಕಿದಷ್ಟು ಆರ್‌ಎಸ್‌‍ಎಸ್‌‍ ಹೆಮರವಾಗಿ ಬೆಳೆಯುತ್ತದೆ. ಅದನ್ನು ಮುಟ್ಟಲು ಬಂದರೆ ಸುಟ್ಟು ಭಸವಾಗುತ್ತೀರಿ ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

Category
ಕರಾವಳಿ ತರಂಗಿಣಿ