image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ

ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಮುಖಂಡ ಸತೀಶ್ ಪೂಜಾರಿ ಬಂಧನ

ದಾವಣಗೆರೆ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಸತೀಶ್ ಪೂಜಾರಿ ಅವರನ್ನು ದಾವಣಗೆರೆ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಬಳಿಕ ದಾವಣಗೆರೆಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಪೂಜಾರಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದ್ವೇಷ ಭಾಷಣ ಮಾಡಿದ್ದರಿಂದ ದಾವಣಗೆರೆಯಲ್ಲಿ ಗಲಾಟೆ ನಡೆದಿದೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ನಡೆದ ಗಲಾಟೆ ಬಳಿಕ ಸತೀಶ್ ಪೂಜಾರಿ ಅಜ್ಞಾತ ಸ್ಥಳ ಸೇರಿದ್ದರು.

Category
ಕರಾವಳಿ ತರಂಗಿಣಿ