image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ : ಭೂಮಿ ಕಳೆದುಕೊಂಡವರಿಗೆ ಎಕರೆಗೆ ₹2.80 ಕೋಟಿ!

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ : ಭೂಮಿ ಕಳೆದುಕೊಂಡವರಿಗೆ ಎಕರೆಗೆ ₹2.80 ಕೋಟಿ!

ಬೆಂಗಳೂರು : ಭೂ ಸ್ವಾಧೀನದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರಿಹಾರದ ಕುರಿತು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಡಿ (ಜಿಬಿಐಟಿ) ಭೂಮಿ ಕಳೆದುಕೊಂಡವರಿಗೆ ಒಂದು ಎಕರೆಗೆ ಪರಿಹಾರವಾಗಿ ಬರೋಬ್ಬರಿ ₹2.80 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಬಿಡದಿ ಬಳಿ ಈ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯಡಿ ಭೂಸ್ವಾಧೀನಕ್ಕೆ ಮುಂದಾಗಿದೆ. ಈ ಭಾಗದಲ್ಲಿ ರೈತರಿಂದ ವಿರೋಧ ಕೇಳಿಬಂದಿದ್ದರಿಂದ ಪರಿಹಾರ ಹಣದ ಬಗ್ಗೆ ಅಪ್‌ಟೇಡ್‌ ನೀಡಿದ್ದಾರೆ. ಜಿಬಿಐಟಿ ಸ್ವಾಧೀನಕ್ಕೆ ಬಿಡದಿ ಭಾಗದ ರೈತರಿಂದ ಭಾರೀ ವಿರೋಧ ಕೂಡ ಕೇಳಿಬರುತ್ತಿದೆ. ಸ್ವಾಧೀನಕ್ಕೆ ಒಂದಿಂಚೂ ಭೂಮಿ ಕೊಡುವುದಿಲ್ಲ. ಯೋಜನೆ ಕೈ ಬಿಡಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆಯೂ ನೀಡಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಮಹತ್ವದ ಮಾಹಿತಿ ನೀಡಿದ್ದಾರೆ.ಜಿಬಿಐಟಿ ಭೂಸ್ವಾಧೀನವು ಭೂಮಿ ಕಳೆದುಕೊಂಡ ರೈತರಿಗೆ ನಮ್ಮ ಸರ್ಕಾರದಿಂದ ಎಕರೆಗೆ ₹1.50 ಕೋಟಿಯಿಂದ ₹2.80 ಕೋಟಿವರೆಗೆ ಪರಿಹಾರ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಈ ಪರಿಹಾರ ಪಡೆಯದ ರೈತರಿಗೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಶೇ.50:50 ಅನುಪಾತದಲ್ಲಿ ನೀಡಲಾಗುತ್ತದೆ. ರೈತರಿಗೆ ಯಾವುದೇ ಅನ್ಯಾಯ ಮಾಡದೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ಹೆಚ್‌.ಡಿ.ಕುಮಾರಸ್ವಾಮಿ ಅವರು ಕೇವಲ ಎಕರೆಗೆ 8000 ಅಡಿ ಕೊಡಬೇಕು ಅಂದಿದ್ರು. ಆದರೆ ನಾನು ನಮ್ಮ ಸರ್ಕಾರಿಂದ ಶೇ 50ರಷ್ಟು ಭೂಮಿ ಕೊಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ರೈತರು ಏನು ಯೋಚನೆ ಮಾಡ್ತಾರೋ ಅದಕ್ಕಿಂತ ದುಪ್ಪಟ್ಟು ಹಣ ಅವರ ಕೈಸೇರುತ್ತೆ ಎಂದು ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ. 

ಕುಮಾರಸ್ವಾಮಿ ಊರನ್ನೇ ಶಿಫ್ಟ್‌ ಮಾಡಲು ಮುಂದಾಗಿದ್ರು. ಆದರೆ ನಾನು ಯಾವ ಊರನ್ನೂ ಅಲ್ಲಿಂದ ಸ್ಥಳಾಂತರ ಮಾಡಬಾರದು ಎಂದು ನಿರ್ಧರಿಸಿದ್ದೇನೆ. ಆ ಊರನ್ನು ಮತ್ತಷ್ಟು ಅಭಿವೃದ್ಧಿ ಮಾಡೋಣ. ಪ್ರತಿ ಊರಿಗೂ ರಿಂಗ್‌ ರೋಡ್‌ ಕ್ರಿಯೇಟ್‌ ಮಾಡೋಣ. ಆ ಊರುಗಳು ಅಲ್ಲಿಯೇ ಇರುತ್ತವೆ. ಯಾವ ಊರಿನ ಆಸ್ತಿಯನ್ನೂ ಬೇರೆ ಕಡೆ ಸ್ಥಳಾಂತರ ಮಾಡದಿರಲು ನಿರ್ಧರಿಸಿದ್ದೇವೆ. ಇದೆಲ್ಲ ಮಾಡಿ ಒಂದು ಎಐ ಸಿಟಿ ನಿರ್ಮಾಣ ಮಾಡಬೇಕು ಅಂದುಕೊಂಡಿದ್ದೀವಿ ಎಂದು ವಿವರಿಸಿದ್ದಾರೆ. ಬಿಡದಿ ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ರೂಪಿಸಿದ್ದೇ ಜೆಡಿಎಸ್ ವರಿಷ್ಠರಾದ ಹೆಚ್.ಡಿ.‌ ಕುಮಾರಸ್ವಾಮಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದರು. ಆಗ ಈ ಯೋಜನೆಗೆ ಸಹಕರಿಸಿದ್ದ ಗೌಡರು ಈಗ ಯಾಕೆ ವಿರೋಧಿಸುತ್ತಿದ್ದಾರೆ? ತಮ್ಮ ಮಗನ ಅವಧಿಯಲ್ಲೇ ಯಾಕೆ ದೇವೇಗೌಡರು ಈ ಯೋಜನೆ ರದ್ದು ಮಾಡಲಿಲ್ಲ ಎಂದು ಕೇಳಿದ್ದರು. ಬಿಜೆಪಿ ಸರ್ಕಾರ 900 ಎಕರೆಯನ್ನು ಕೆಐಎಡಿಬಿಗೆ ಕೊಟ್ಟಾಗ ಕೂಡ ಏಕೆ ಸುಮ್ಮನಿದ್ರು? ಎಂದು ವಾಗ್ದಾಳಿ ನಡೆಸಿದ್ದರು. ಅಧಿಕಾರ ಇದ್ದಾಗ ಬಿ.ಎಸ್.ಯಡಿಯೂರಪ್ಪ, ಅಶೋಕ್ ಯಾಕೆ ರೈತರ ಭೂಮಿ ಉಳಿಸಲಿಲ್ಲ? ದೇವೇಗೌಡರು ಕೂಡ ತಮ್ಮ ಮಗನಿಗೆ ಇದು ಸರಿಯಲ್ಲ, ಬೇಡ ಎಂದು ಹೇಳಬಹುದಿತ್ತು. ಆಗ ಇದು ಅವರ ಕ್ಷೇತ್ರವಾಗಿತ್ತು. ಅಂದು ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಇಂದು ರಾಜಕಾರಣ ಮಾಡಲು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

Category
ಕರಾವಳಿ ತರಂಗಿಣಿ