ಬೆಂಗಳೂರು: ರಾಜ್ಯ ಸರ್ಕಾರವು ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸುತ್ತಿರುವ ಹಲವು ಪ್ರಕರಣಗಳು ನಗರದಲ್ಲಿ ನಡೆದಿವೆ. ನಗರದ 19 ಬ್ಲಾಕ್‌ಗಳಲ್ಲಿ ಶೇ 62ಕ್ಕೂ ಹೆಚ್ಚು ಮಂದಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಸಮೀಕ್ಷೆಗಾಗಿ ನಗರದ ವ್ಯಾಪ್ತಿಯಲ್ಲಿರುವ ಪ್ರತಿ 150 ಮನೆಗಳನ್ನು ಒಂದು ಬ್ಲಾಕ್ ಆಗಿ ವರ್ಗೀಕರಿಸಲಾಗಿದೆ. ಜಯನಗರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಬರುವ ವಿವಿಧ, 19 ಬ್ಲಾಕ್‌ಗಳಲ್ಲಿ ಶನಿವಾರ ಸಂಜೆವರೆಗೆ ಒಟ್ಟು 2,923 ಮನೆಗಳಿಗೆ ಸಮೀಕ್ಷಕರು ಭೇಟಿ ನೀಡಿದ್ದಾರೆ. ಈ ಪೈಕಿ 1,756 ಮನೆಯವರು 'ನಾವು ಮಾಹಿತಿ' ನೀಡುವುದಿಲ್ಲ ಎಂದಿದ್ದಾರೆ. ಈ ಬ್ಲಾಕ್‌ಗಳಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿರುವುದು 920 ಮನೆಗಳಲ್ಲಿ ಮಾತ್ರ ಎನ್ನಲಾಗಿದೆ.