image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ : ಖೈದಿಗಳ ದಿನಗೂಲಿ ಬಿಡುಗಡೆ ತಡೆಹಿಡಿದ ಸರಕಾರ?

ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ : ಖೈದಿಗಳ ದಿನಗೂಲಿ ಬಿಡುಗಡೆ ತಡೆಹಿಡಿದ ಸರಕಾರ?

ಬೆಂಗಳೂರು : ರಾಜ್ಯದ ಜೈಲಿನಲ್ಲಿರುವ ಕೈದಿಗಳಿಗೆ ದೇಶದಲ್ಲೇ ಅತಿ ಹೆಚ್ಚು, ಅಂದರೆ 615 ರು. ದಿನಗೂಲಿ ಇದ್ದು, ಸೆರೆಮನೆಯಲ್ಲಿದ್ದುಕೊಂಡೇ ಮಾಸಿಕ 18 ಸಾವಿರ ರು.ವರೆಗೂ ದುಡಿಯುತ್ತಿದ್ದಾರೆ. ಆದರೆ ಇದೀಗ ಆ ಕೈದಿಗಳಿಗೆ 'ಆರ್ಥಿಕ ಬರ' ಎದುರಾಗಿದೆ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕೈದಿಗಳ ದಿನಗೂಲಿ ಬಿಡುಗಡೆಗೊಳಿಸದೆ ರಾಜ್ಯ ಸರ್ಕಾರ ತಡೆ ಹಿಡಿದಿದೆ. ಇದು ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ ಎಂಬ ಮಾತುಗಳು ಕೇಳಿ ಬಂದಿದೆಯಾದರೂ,  ಕೈದಿಗಳ ದಿನಗೂಲಿ ಏರಿಕೆಯಿಂದ ಎದುರಾದ ಹೆಚ್ಚುವರಿ ವೆಚ್ಚ ಭರಿಸಲು ಸರ್ಕಾರಕ್ಕೆ ಹಣಕಾಸು ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಎರಡು ವರ್ಷಗಳಲ್ಲಿ 33 ಕೋಟಿ ರೂ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ. ಈ ಹಣ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. 

ಕೈದಿಗಳ ಖಾತೆಗೆ ನೇರವಾಗಿ ದಿನಗೂಲಿ ಜಮೆಯಾಗುತ್ತದೆ. ಜನಧನ್ ಕಾರ್ಯಕ್ರಮದ ಮೂಲಕ ಕೈದಿಗಳಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ವಾರಕೊಮ್ಮೆ ದಿನಗೂಲಿ ಲೆಕ್ಕ ಹಾಕಿ ಕೈದಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ತಾವು ದುಡಿದು ಸಂಪಾದಿಸಿದ ಹಣವನ್ನು ಕುಟುಂಬದವರಿಗೆ ನೀಡಲು ಕೈದಿಗಳಿಗೆ ಅವಕಾಶವಿದೆ. ಇಲ್ಲದೆ ಹೋದರೆ ಜೈಲಿನಿಂದ ಬಿಡುಗಡೆ ವೇಳೆ ಅವರಿಗೆ ದಿನಗೂಲಿ ಹಣ ಹಂಚಿಕೆಯಾಗುತ್ತದೆ. ಐದು ವರ್ಷಗಳ ಹಿಂದೆ ಕೈದಿಗಳಿಗೆ ಕನಿಷ್ಠ 175 ರಿಂದ ಗರಿಷ್ಠ 250 ರೂ. ನೀಡಲಾಗುತ್ತಿತ್ತು. ಆದರೆ 2022ರಲ್ಲಿ ಕಾರ್ಮಿಕ ಕಾಯ್ದೆಯಡಿ ಕೈದಿಗಳನ್ನು ಪರಿಗಣಿಸಲಾಯಿತು. ಬಳಿಕ ಕೈದಿಗಳ ದಿನಗೂಲಿ ಸಹ ಮೂರು ಪಟ್ಟು ಹೆಚ್ಚಾಯಿತು. ಇನ್ನು ಮೂರು ವರ್ಷಗಳಿಗೊಮ್ಮೆ ದಿನಗೂಲಿ ಪರಿಷ್ಕರಣೆ ಮಾಡಬೇಕು. ಆದರೆ ಇದುವರೆಗೆ ಮತ್ತೆ ದಿನಗೂಲಿ ಪರಿಷ್ಕರಣೆ ಆಗಿಲ್ಲ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ