image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಇದು ಯುದ್ಧದ ಹೊಸ ಅಧ್ಯಾಯ ಎಂದ ಇಸ್ರೇಲ್

ಇದು ಯುದ್ಧದ ಹೊಸ ಅಧ್ಯಾಯ ಎಂದ ಇಸ್ರೇಲ್

ಲೆಬನಾನ್: ಲೆಬನಾನ್​ನಲ್ಲಿ ಹಲವೆಡೆ ಎಲೆಕ್ಟ್ರಾನಿಕ್ಸ್ ವಾಕಿಟಾಕಿ ಮತ್ತು ಸೋಲಾರ್ ಸಲಕರಣೆಗಳು ಸ್ಫೋಟಗೊಂಡಿದ್ದು, ಕನಿಷ್ಠ 20 ಜನರು ಮೃತಪಟ್ಟು, 450 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಲೆಬೆನಾನ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಹಿಜ್ಬುಲ್ಲಾ ಬಳಸುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

ಲೆಬನಾನ್​ನಲ್ಲಿ ಪೇಜರ್​ಗಳು ಸ್ಫೋಟಗೊಂಡು 12 ಜನ ಸಾವನ್ನಪ್ಪಿ, 280ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವರದಿಯಾಗಿತ್ತು. ಈ ಬೆನ್ನಲ್ಲೇ ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಸಂವಹನ ಸಾಧನಗಳು ಬ್ಲಾಸ್ಟ್ ಆಗಿದ್ದು, ಅಪಾರ ಸಾವು-ನೋವು ಸಂಭವಿಸಿದೆ. ಹಿಜ್ಬುಲ್ಲಾವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಈ ದೇಶಗಳಲ್ಲಿ ಉಂಟಾಗಿದೆ.

ಈ ಮಧ್ಯೆ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಸಾಮಾಜಿಕ ಜಾಲಾತಾಣ 'ಎಕ್ಸ್'​ನಲ್ಲಿ ಪೋಸ್ಟ್ ಮಾಡಿ, 'ಇದು ಯುದ್ಧದ ಹೊಸ ಹಂತ. ನಾವು ದೇಶದ ಉತ್ತರದ ಪ್ರದೇಶಗಳತ್ತ ಗಮನ ಕೇಂದ್ರೀಕರಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

'ನಾವು ಯುದ್ಧದ ಹೊಸ ಹಂತವನ್ನು ಆರಂಭಿಸಿದ್ದೇವೆ. ದೇಶದ ಉತ್ತರ ಭಾಗಗಳಿಗೆ ಸೇನೆ ಹಾಗೂ ಸಂಪನ್ಮೂಲಗಳನ್ನು ಕಳುಹಿಸುತ್ತಿದ್ದೇವೆ. ಇಸ್ರೇಲ್​ನ ಉತ್ತರ ಭಾಗದ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಎಲ್ಲ ಕ್ರಮ ಕೈಗೊಳ್ಳಲು ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಿದ್ದೇವೆ' ಎಂದು ಇಸ್ರೇಲ್ ರಕ್ಷಣಾ ಸಚಿವರು ಪೋಸ್ಟ್ ಮಾಡಿದ್ದಾರೆ.

ಬುಧವಾರ, ಲೆಬನಾನ್‌ನಲ್ಲಿ ವಾಕಿ-ಟಾಕಿ ಸ್ಫೋಟಗಳ ನಂತರ ಗಾಯಗೊಂಡವರನ್ನು ರಕ್ಷಿಸಲು ಮತ್ತು ಸ್ಥಳಾಂತರಿಸಲು ಲೆಬನಾನಿನ ರೆಡ್‌ಕ್ರಾಸ್‌ನ ಡಜನ್​ಗಟ್ಟಲೆ ಆಂಬ್ಯುಲೆನ್ಸ್​ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Category
ಕರಾವಳಿ ತರಂಗಿಣಿ