image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅವಧಿ ಮೀರಿದ ಕ್ರಿಮಿನಾಶಕ, ಗೊಬ್ಬರ ನೀಡುತ್ತಿರುವ ರೈತ ಸಂಪರ್ಕ ಕೇಂದ್ರಗಳು

ಅವಧಿ ಮೀರಿದ ಕ್ರಿಮಿನಾಶಕ, ಗೊಬ್ಬರ ನೀಡುತ್ತಿರುವ ರೈತ ಸಂಪರ್ಕ ಕೇಂದ್ರಗಳು

ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ರೈತ ಸಂಪರ್ಕ ಕೇಂದ್ರಗಳು ಎರಡು ವರ್ಷದ ಹಿಂದೆಯೇ ಅವಧಿ ಮೀರಿದ್ದ ಕ್ರಿಮಿನಾಶಗಳನ್ನು ರೈತರಿಗೆ ಮಾರಾಟ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ವಂಚಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳ ವಿರುದ್ದ ಹಾಗೂ ಅಲ್ಲಿನ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಆಗಬೇಕು ಮತ್ತು ಅವಧಿ ಮೀರಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆಯಬೇಕು. ರೈತರಿಗೆ ವಂಚಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಅಲ್ಲದೇ, ಇಷ್ಟೆಲ್ಲಾ ನಡೆಯತ್ತಿದ್ದರೂ ಕೃಷಿ ಸಚಿವರು ಕಾಣೆಯಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತ ರೈತ ಸಂಪರ್ಕ ಕೇಂದ್ರಗಳು ಅವಧಿ ಮೀರಿದ ಔಷಧಿ ನೀಡಿ ವಂಚಿಸಿದರೆ, ಇತ್ತ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಫರ್ಟಿಲೈಸರ್ ಅಂಗಡಿ ಮಾಲೀಕ ಗೊಬ್ಬರ ಹಾಗೂ ಇತರೆ ವಸ್ತುಗಳನ್ನು ಎಂಆರ್​ಪಿ ದರಕ್ಕಿಂತ ಎರಡು ಪಟ್ಟು ಜಾಸ್ತಿ ದರ ಪಡೆದು ರೈತರಿಗೆ ಮಾರಾಟ ಮಾಡುತ್ತಿವೆ. ರೈತರು ಗೊಬ್ಬರದ ಬಿಲ್ ಕೇಳಿದರೆ ನಕಲಿ ಬಿಲ್ ನೀಡಲಾಗುತ್ತಿದೆ. ಸದ್ಯ ರೈತ ಹಾಗೂ ಅಂಗಡಿ ಮಾಲೀಕರ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ. ದುಪ್ಪಟ್ಟು ದರಕ್ಕೆ ವಸ್ತುಗಳ ಮಾರಾಟ ಮಾಡಿದ ಶ್ರೀ ರೇವಣಸಿದ್ದೇಶ್ಚರ ಫರ್ಟಿಲೈಸರ್ ಅಂಗಡಿ ಹಾಗೂ ಅವಧಿ ಮೀರಿದ ಔಷಧಿ ಮಾರಾಟ ಮಾಡುತ್ತಿರುವ ಆರ್​ಎಸ್​ಕೆ ಕೇಂದ್ರಗಳ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗಿದೆ.

Category
ಕರಾವಳಿ ತರಂಗಿಣಿ