image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಕ್ಫ್ ಆಸ್ತಿ ಯಾರಿಗೆ ಯಾರೋ ನೀಡಿದ ವರದಕ್ಷಣೆಯು ಅಲ್ಲ, ಸರಕಾರದ ಆಸ್ತಿಯು ಅಲ್ಲ : ಅಬ್ದುಲ್ ಮಜೀದ್

ವಕ್ಫ್ ಆಸ್ತಿ ಯಾರಿಗೆ ಯಾರೋ ನೀಡಿದ ವರದಕ್ಷಣೆಯು ಅಲ್ಲ, ಸರಕಾರದ ಆಸ್ತಿಯು ಅಲ್ಲ : ಅಬ್ದುಲ್ ಮಜೀದ್

 ಗಂಗಾವತಿ: 'ವಲ್ಫ್ ಆಸ್ತಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರ ಮಾವ ನೀಡಿದ ವರದಕ್ಷಿಣೆಯಲ್ಲ. ಸರ್ಕಾರದ ಆಸ್ತಿಯೂ ಅಲ್ಲ. ಮುಸ್ಲಿಮರು ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ನೀಡಿದ ಆಸ್ತಿಯಾಗಿದೆ' ಎಂದು ಎಸ್‌.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್‌ ಹೇಳಿದರು. ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ ವತಿಯಿಂದ ಸೋಮವಾರ ನಡೆದ ವಕ್ಸ್ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ವಕ್ಸ್ ಉಳಿಸಿ, ಸಂವಿಧಾನ ರಕ್ಷಿಸಿ ಬೃಹತ್ ಜನ ಸಮಾವೇಶದಲ್ಲಿ ಅವರು ಮಾತನಾಡಿದರು. 'ವಕ್ಸ್‌ ತಿದ್ದುಪಡಿ ಕಾಯ್ದೆ ಭಾರತದ 20 ಕೋಟಿ ಮುಸ್ಲಿಮರಿಗೆ ಅನ್ಯಾಯವೆಸಗುವಂತದ್ದಾಗಿದೆ. ಮುಸ್ಲಿಮರಿಗೆ ಶರಿಯತ್ ಮತ್ತು ಸಂವಿಧಾನ ಎರಡು ಕಣ್ಣಿದ್ದಂತೆ. ಸರ್ಕಾರಗಳು ಯಾವುದೇ ಒಂದು ಕಾನೂನು ಜಾರಿ ಮಾಡುವ ಮುನ್ನ ಸಮುದಾಯದ ಹಿತಾಸಕ್ತಿ, ಸಾಧಕ-ಬಾಧಕ ಚರ್ಚಿಸಬೇಕು. ಇದ್ಯಾವುದು ಮಾಡದೇ ವಕ್ಸ್‌ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗಿದೆ' ಎಂದು ಆರೋಪಿಸಿದರು.

'ವಕ್ಸ್‌ ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಯಾವೊಬ್ಬ ಮುಸ್ಲಿಂ ವ್ಯಕ್ತಿಯೂ ಅರ್ಜಿ ಸಲ್ಲಿಸಲಿಲ್ಲ. ಆದರೂ ತಿದ್ದುಪಡಿ ಮಾಡಲಾಗಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಕ್ಸ್‌ ಬೋರ್ಡ್‌ನಲ್ಲಿ ಆ‌ರ್.ಎಸ್‌.ಎಸ್ ಸದಸ್ಯರನ್ನು ಕೂರಿಸುವ ಹುನ್ನಾರ ನಡೆಸಿ, ವಕ್ಸ್ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ನೀಡುವ ಷಡ್ಯಂತರ ಮಾಡಲಾಗಿದೆ. ಇದು ಮುಸ್ಲಿಮರ ವಿರುದ್ಧ ಪ್ರಧಾನಿ ಮೋದಿ ಸಾರಿದ ಯುದ್ಧವಾಗಿದೆ' ಎಂದರು. ಹಿರಿಯ ಚಿಂತಕ ಶಿವಸುಂದರ್ ಮಾತನಾಡಿ, 'ಕೆಸರಿದ್ದರೆ ಮಾತ್ರ ಕಮಲ(ಬಿಜೆಪಿ) ಅರಳುತ್ತದೆ. ಮುಸ್ಲಿಮರು, ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲ್ಲ. ದೇಶದಲ್ಲಿ ಬಿಜೆಪಿ ಸರ್ಕಾರಗಳಿದ್ದರೆ ಮುಸ್ಲಿಮರಿಂದ ದೇಶಕ್ಕೆ ತೊಂದರೆಯಿದೆ ಎಂದು ಹಿಂದೂಗಳಿಗೆ ಭಯ ಹುಟ್ಟಿಸಿ, ಮತ ಗಳಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಇದ್ದರೆ ಬರೀ ಹಿಜಾಬ್, ಕೋಮು ಗಲಭೆಗಳೇ ಹೆಚ್ಚು ಆಗುತ್ತವೆ' ಎಂದು ಟೀಕಿಸಿದರು.

'ಹಿಂದೂ ದೇವಾಲಯಗಳಲ್ಲಿ ಹಿಂದೂಗಳೇತರರು ಕೆಲಸದಲ್ಲಿ ಇರಬಾರದು ಎಂದು ಹಿಂದೂ ಕಾಯ್ದೆಗಳಲ್ಲಿ ಸ್ಪಷ್ಟವಾಗಿವೆ. ಆದರೆ ವಕ್ಸ್‌ ಬೋರ್ಡ್‌ನಲ್ಲಿ ಮಾತ್ರ ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬೇಕು ಎನ್ನುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಬದುಕಿದ್ದು, ಸತ್ತಂತೆ ಮಾಡಲು ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ಸಾವರ್ಕರ್ ನೀತಿ ಅನುಸರಿಸುತ್ತಿದೆ' ಎಂದರು. ಅಜಮೇ‌ರ್ ಶರೀಫ್ ಪೀಠಾಧಿಪತಿ ಸೈಯದ್ ಸರ್ವರ್ ಚಿಕ್ಕಿ, ಸೈಯದ್ ತನ್ನೀರ್ ಹಾ, ಅಬೂತಾಲಿಬ್‌ ರಹ್ಮಾನಿ, ಇಪೇಖಾರದ ಆಹ್ಮದ್ ಖಾ, ಮಹ್ಮದ್ ಅಲಿ ಹಿಮಾಯತಿ, ಶೇಖ್ ಫರೀದ್ ಉಮ್ಮಿ, ಎಸ್.ಬಿ.ಖಾದ್ರಿ ಭಾಗವಹಿಸಿದ್ದರು.

ಮಕ್ಸದ್ ಇಮ್ರಾನ್ ರಷಾದಿ ಸಮುದಾಯದ ಮುಖಂಡ ಒಂದು ಸಲ ವಕ್ಸ್ ಆಸ್ತಿ ಯಾವತ್ತಿಗೂ ವಕ್ಸ್ ಆಸ್ತಿಯೇ ಆಗಿರುತ್ತದೆ ಎಂದು ಸುಪ್ರಿಂ ಕೋರ್ಟ್ ಈ ಹಿಂದೆಯೇ ಹೇಳಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರ ಬಜೆಟ್‌ನಲ್ಲಿ ಶೇ 38ರಷ್ಟು ಕಡಿತ ಮಾಡಲಾಗಿದೆ ಎಂದರು.

Category
ಕರಾವಳಿ ತರಂಗಿಣಿ